HEALTH TIPS

ಅಪರೂಪದ ನೃತ್ಯ ವೈವಿಧ್ಯ ಮತ್ತು ಚಿಣ್ಣರ ಚಿಲಿಪಿಲಿಯೊಂದಿಗೆ ಬನಾರಿಯಲ್ಲಿ ಯಶಸ್ವಿಗೊಂಡ ಶ್ರೀ ಗೋಪಾಲಕೃಷ್ಣ ಕಲಾಸಂಘದ 79ನೇ ವಾರ್ಷಿಕೋತ್ಸವ

                   ಮುಳ್ಳೇರಿಯ: ಬನಾರಿ ಶ್ರೀ ಗೋಪಾಲಕೃಷ್ಣ ಕಲಾಸಂಘದ 79ನೇ ವಾರ್ಷಿಕೋತ್ಸವ ಇತ್ತೀಚೆಗೆ ಬನಾರಿಯಲ್ಲಿ ನಡೆಯಿತು. ಈಸಂದರ್ಭದಲ್ಲಿ ತುಂಬಾ ವಿಶಿಷ್ಟವಾದ ಕಾರ್ಯಕ್ರಮವನ್ನು ಅಳವಡಿಸಲಾಯಿತು. ದೇಲಂಪಾಡಿ ಶಾಲೆಯ ಆಯ್ದ ವಿದ್ಯಾರ್ಥಿಗಳ ನೃತ್ಯ ವೈವಿಧ್ಯ ಪ್ರದರ್ಶನ ಜನಮನವನ್ನು ಸೂರೆಗೊಂಡಿತು. ಅಂಗನವಾಡಿಯ ಪುಟಾಣಿಗಳಿಂದ ಹಾಡು, ನರ್ತನಗಳ ಮುಗ್ಧ ಕಾರ್ಯಕ್ರಮ ನೋಟಕರ ಮೆಚ್ಚುಗೆಗೆ ಪಾತ್ರವಾಯಿತು. ದೇಲಂಪಾಡಿ ಶಾಲೆಯ ಶ್ರೀಮತಿ ಜಲಜಾಕ್ಷಿ ರೈ ಮತ್ತು ಅಂಗನವಾಡಿಯ ಅಧ್ಯಾಪಿಕೆ ದೇವಕಿ ಟೀಚರ್ ಕಾರ್ಯಕ್ರಮವನ್ನು ಸಂಯೋಜಿಸಿದರು. 




                 ಬನಾರಿ ಶ್ರೀಗೋಪಾಲಕೃಷ್ಣ ಕಲಾಸಂಘದ ಮಹಿಳಾ ಕಲಾವಿದೆಯರಿಂದ ಸಂಘದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಮೋಹನ ಮೆಣಸಿನಕಾನ, ಚೆಂಡೆ ಮದ್ದಳೆಯಲ್ಲಿ ಟಿ.ಡಿ. ಗೋಪಾಲಕೃಷ್ಣ ಭಟ್,  ವಿಷ್ಣು ಶರಣ ಬನಾರಿ,  ಅಪ್ಪಯ್ಯ ಮಣಿಯಾಣಿ ಮಂಡೆಕೋಲು, ಚಕ್ರತಾಳದಲ್ಲಿ ವಿದ್ಯಾಭೂಷಣ ಪಂಜಾಜೆ ಭಾಗವಹಿಸಿದರು. ಮುಮ್ಮೇಳದಲ್ಲಿ ಶಾಂತಕುಮಾರಿ ಚೆಂಡೆಮೂಲೆ, ನಳಿನಾಕ್ಷಿ ಹರೀಶ್ ಮುದಿಯಾರು,  ಸುಮಲತಾ ಉದಯ ಕುಮಾರ್ ದೇಲಂಪಾಡಿ,  ಸರಿತಾ ರಮಾನಂದ ರೈ ದೇಲಂಪಾಡಿ ಭಾಗವಹಿಸಿದರು.  ನಾರಾಯಣ ದೇಲಂಪಾಡಿ ಅವರ ಅರ್ಥಕೃತಿಯನ್ನು ಆಧರಿಸಿದ ಸಮರ ಸನ್ನಾಹ ಎನ್ನುವ ಪ್ರಸಂಗವನ್ನು ಪ್ರಸ್ತುತಪಡಿಸಲಾಯಿತು.  


ರಂಜಿಸಿದ ವಿಭೀಷಣ ನೀತಿ 

          ಬನಾರಿ ಶ್ರೀ ಗೋಪಾಲಕೃಷ್ಣ ಕಲಾಸಂಘದ ವಾರ್ಷಿಕೋತ್ಸವದ ವೇದಿಕೆಯಲ್ಲಿ ಸಂಪನ್ನಗೊಂಡ ವಿಭೀಷಣ ನೀತಿ ಎನ್ನುವ ತಾಳಮದ್ದಳೆ ಬಹುಜನರ ಪ್ರಶಂಸೆಗೆ ಪಾತ್ರವಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕುಮಾರಿ ರಚನಾ ಚಿದ್ಗಲ್,ಮೋಹನ ಮೆಣಸಿನಕಾನ, ಚೆಂಡೆ ಮದ್ದಳೆ ವಾದಕರಾಗಿ ಶಂಕರ ನಾರಾಯಣ ಭಟ್ ಪದ್ಯಾಣ, ಕುಮಾರ ಸುಬ್ರಹ್ಮಣ್ಯ, ೀ ಟಿ.ಡಿ. ಗೋಪಾಲಕೃಷ್ಣ ಭಟ್, ವಿಷ್ಣುಶರಣ ಬನಾರಿ, ಶ್ರೀವತ್ಸ ಸುಳ್ಯ ಭಾಗವಹಿಸಿದರು. ಮುಮ್ಮೇಳದಲ್ಲಿ ಶ್ರೀವೆಂಕಟರಾಮ ಭಟ್ ಸುಳ್ಯ, ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಡಾ. ರಮಾನಂದ ಬನಾರಿ,  ಸದಾಶಿವ ರೈ ಬೆಳ್ಳಿಪ್ಪಾಡಿ,  ಗಣೇಶ ಕಂಬಳಿಕೆರೆ, ಎಂ. ರಮಾನಂದ ರೈ ಮತ್ತು ವಿದ್ಯಾಭೂಷಣ ಪಂಜಾಜೆ ಅವರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ನೃತ್ಯಗುರು ಸರೋಜಿನಿ ಬನಾರಿ ಅವರ ನಿರ್ದೇಶನದಲ್ಲಿ, ಗುರು ವಿಶ್ವವಿನೋದ ಬನಾರಿಯವರ ಮೇಲ್ನೋಟದಲ್ಲಿ ಸಂಘದ ಉದಯೋನ್ಮುಖ ಪ್ರತಿಭೆಗಳಿಂದ ಯಕ್ಷಗಾನ ಬಯಲಾಟ ಶಕಟಾಸುರ ವಧೆ, ತರಣಿಸೇನಾ ಕಾಳಗ, ಗಿರಿಜಾ ಕಲ್ಯಾಣ ನಡೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries