ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಜನ್ಮದಿನದ ಅಂಗವಾಗಿ ಬಿಜೆಪಿ ಮಂಜೇಶ್ವರ ವಿಧಾನಸಭಾ ಎನ್.ಡಿ.ಎ. ಅಭ್ಯರ್ಥಿ ಕೆ.ಸುರೇಂದ್ರನ್ ಗೋವಿಂದ ಪೈಗಳ ನಿವಾಸದಲ್ಲಿ ಪುತ್ಥಳಿಗೆ ಪುಷ್ಪಾರ್ಚನೆಗೈದರು.
ಕನ್ನಡದ ಪ್ರಥಮ ರಾಷ್ಟಕವಿ ಗೋವಿಂದ ಪೈಗಳ ಜನ್ಮ ನಾಡಿನಲ್ಲಿ ಕೇರಳ ಎಡರಂಗ ಸರ್ಕಾರ ಮಲಯಾಳಂ ಭಾಷಾ ಮಸೂದೆ ಜಾರಿ ಮಾಡಿ ಗಡಿನಾಡ ಕನ್ನಡಿಗರ ಸಂವಿಧಾನ ಬದ್ದ ಹಕ್ಕುಗಳನ್ನು ಕಸಿದಿದೆ ಎಂದು ಅವರು ದೂರಿದರು. ಮಂಜೇಶ್ವರ ಶಾಸಕರು ಮಲಯಾಳಂ ಭಾಷಾ ಮಸೂದೆ ಜಾರಿ ಆಗುವ ಅಧಿವೇಶನದಲ್ಲಿ ಭಾಗವಹಿಸದೆ ಗೈರುಹಾಜರಾಗಿ ಕನ್ನಡ ವಿರೋಧಿ ನೀತಿ ತೋರಿದರು ಎಂದು ಸುರೇಂದ್ರನ್ ಆರೋಪಿದರು.
ಗಡಿನಾಡ ಕನ್ನಡಿಗರ ಹಕ್ಕು ಸಂರಕ್ಷಣೆ ನನ್ನ ಗುರಿ, ಭಾಷಾ ಅಲ್ಪಸಂಖ್ಯಾ ಜನರ ನ್ಯಾಯಯುತ ಬೇಡಿಕೆಗಳಿಗೆ ಬಿಜೆಪಿ ಸ್ಪಂದಿಸಲಿದೆ. ಜೊತೆಗೆ ಹೋರಾಟಕ್ಕೆ ನೇತೃತ್ವ ನೀಡಲಿದೆ ಎಂದು ಕೆ.ಸುರೇಂದ್ರನ್ ಹೇಳಿದರು.
ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ, ಮುಖಂಡರಾದ ಯಾದವ ಬಡಾಜೆ, ಹರಿಶ್ಚಂದ್ರ ಎಂ, ರಾಜೇಶ್ ತೂಮಿನಾಡು, ಎಸ್.ಎನ್. ಭಟ್ ಜೊತೆಗಿದ್ದರು.

.jpg)
.jpg)
