ನವದೆಹಲಿ: ಲೋಕಸಭೆ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಈವರೆಗೆ 143 ಸಂಸದರನ್ನು ಸಂಸತ್ತಿನಿಂದ ಅಮಾನತು ಮಾಡಲಾಗಿದೆ. ರಾಜ್ಯಸಭೆಯಿಂದ 46 ಮತ್ತು ಲೋಕಸಭೆಯಿಂದ 97 ಸಂಸದರನ್ನು ಅಮಾನತು ಮಾಡಲಾಗಿದೆ.
0
samarasasudhi
ಡಿಸೆಂಬರ್ 21, 2023
ನವದೆಹಲಿ: ಲೋಕಸಭೆ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಈವರೆಗೆ 143 ಸಂಸದರನ್ನು ಸಂಸತ್ತಿನಿಂದ ಅಮಾನತು ಮಾಡಲಾಗಿದೆ. ರಾಜ್ಯಸಭೆಯಿಂದ 46 ಮತ್ತು ಲೋಕಸಭೆಯಿಂದ 97 ಸಂಸದರನ್ನು ಅಮಾನತು ಮಾಡಲಾಗಿದೆ.
ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 4ರಂದು ಆರಂಭವಾಗಿದೆ.
ಅಮಾನತುಗೊಂಡಿರುವ ಸಂಸದರಿಗೆ ಲೋಕಸಭೆ ಸಚಿವಾಲಯ ಕೆಲವು ಷರತ್ತುಗಳನ್ನು ವಿಧಿಸಿದೆ ಅವುಗಳೆಂದರೆ..
ಅಮಾನತಾದ ಸಂಸದರು ಸಂಸತ್ತಿನ ಪ್ರವೇಶ ಮಂಟಪ, ಗ್ಯಾಲರಿ ಮತ್ತು ಚೇಂಬರ್‌ಗಳಿಗೆ ಬರುವಂತಿಲ್ಲ
ಅವರು ಸದಸ್ಯರಾಗಿರುವ ಸಂಸದೀಯ ಸಮಿತಿಗಳ ಸಭೆಗಳಿಂದಲೂ ಅವರನ್ನು ಅಮಾನತುಗೊಳಿಸಲಾಗಿದೆ . ಅವರ ಹೆಸರಿನಲ್ಲಿ ಯಾವುದೇ ವಸ್ತುವನ್ನು ಇರಿಸುವಂತಿಲ್ಲ
ಅಮಾನತಿನ ಅವಧಿಯಲ್ಲಿ ಅವರು ಮಂಡಿಸಿದ ಯಾವುದೇ ಸೂಚನೆ ಸ್ವೀಕಾರಾರ್ಹವಲ್ಲ
ಅವರು ತಮ್ಮ ಅಮಾನತು ಅವಧಿಯಲ್ಲಿ ಸಮಿತಿಗಳಿಗೆ ನಡೆದ ಚುನಾವಣೆಯಲ್ಲಿ ಮತ ಹಾಕುವಂತಿಲ್ಲ
ಅಮಾನತು ಅವಧಿಯ ದೈನಂದಿನ ಭತ್ಯೆಗೆ ಅವರು ಅರ್ಹರಾಗಿರುವುದಿಲ್ಲ.