HEALTH TIPS

ಪೋಲೀಸ್ ಶ್ವಾನ ಸಾವಿನಲ್ಲಿ ನಿಗೂಢತೆ: ವಿಷ ಸೇವನೆ ಕಾರಣವೆಂದು ವರದಿ: ಮೂವರು ಪೋಲೀಸರ ವಿರುದ್ಧ ಕ್ರಮ

                    ತಿರುವನಂತಪುರಂ: ಹಲವು ಪ್ರಕರಣಗಳನ್ನು ಸಾಬೀತುಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಪೋಲೀಸ್ ಶ್ವಾನ ಕಲ್ಯಾಣಿ ಸಾವು ನಿಗೂಢವಾಗಿದೆ.

                      ವಿಷ ಸೇವನೆಯಿಂದ ಶ್ವಾನ ಸಾವನ್ನಪ್ಪಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ. ಈ ಹಿನ್ನೆಲೆಯಲ್ಲಿ ಮೂವರು ಪೋಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪೂಂತುರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

                     ಪೂಂತುರ ಶ್ವಾನದಳದ ಎಸ್‍ಐ ಉಣ್ಣಿತ್ತಾನ್ ಹಾಗೂ ನಾಯಿಗೆ ತರಬೇತಿ ನೀಡಿದ ಇಬ್ಬರು ಪೋಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ನಗರ ಪೋಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

               ತಿರುವನಂತಪುರಂ ನಗರ ಪೆÇಲೀಸರ ಶ್ವಾನದಳದ ಸದಸ್ಯ ಕಲ್ಯಾಣಿ ನವೆಂಬರ್ 20ರಂದು ಮೃತಪಟ್ಟಿತ್ತು. ಕಲ್ಯಾಣಿಗೆ ಎಂಟು ವರ್ಷ. ಕಲ್ಯಾಣಿ ಇನ್ಸ್ ಪೆಕ್ಟರ್ ಶ್ರೇಣಿಯ ನಾಯಿ. ಅಸಹಜವಾಗಿ ಊದಿಕೊಂಡ ಹೊಟ್ಟೆಯೊಂದಿಗೆ ನಾಯಿ ಸಾವನ್ನಪ್ಪಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries