HEALTH TIPS

ಗಾಜಾದಲ್ಲಿ ಹಮಾಸ್‌ ಸುರಂಗ ಪತ್ತೆ: ಇಸ್ರೇಲ್‌ ಸೇನೆ

           ಗಾಜಾ ಪಟ್ಟಿ : ಕದನ ವಿರಾಮ ಘೋಷಿಸಲು ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಒತ್ತಡ ಮತ್ತು ಒತ್ತೆಯಾಳುಗಳ ಸುರಕ್ಷಿತ ವಾಪಸಾತಿಗೆ ಕುಟುಂಬಗಳ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ ಗಾಜಾ ಪಟ್ಟಿಯಲ್ಲಿ ಇಸ್ರೇಲ್‌ ಸೇನೆ ತನ್ನ ಆಕ್ರಮಣ ತೀವ್ರಗೊಳಿಸುತ್ತಿದೆ.

          ಅಲ್ಲದೆ, ಹಮಾಸ್ ಬಂಡುಕೋರರ ಅತಿ ದೊಡ್ಡ ಸುರಂಗವನ್ನು ಗಡಿ ಭಾಗದಲ್ಲಿ ಭಾನುವಾರ ಪತ್ತೆಮಾಡಿದ್ದು, ಇದು ನಾಲ್ಕು ಕಿ.ಮೀ ಉದ್ದವಿದೆ ಎಂದು ಇಸ್ರೇಲ್‌ ಹೇಳಿದೆ.

              ಎರೆಜ್‌ ಪ್ರದೇಶದ ಗಡಿ ಸಮೀಪ ಪತ್ತೆಯಾಗಿರುವ ಈ ಸುರಂಗ 4 ಕಿ.ಮೀನಷ್ಟು ಉದ್ದವಿದೆ. ಸಣ್ಣ ವಾಹನಗಳು ಸಂಚರಿಸುವಷ್ಟು ದೊಡ್ಡದು. ಹಳಿಗಳು, ವಿದ್ಯುತ್, ಒಳಚರಂಡಿ ಮತ್ತು ಸಂವಹನ ಜಾಲವನ್ನು ಇದು ಒಳಗೊಂಡಿದೆ. ಈ ಸುರಂಗವನ್ನು ಹಲವಾರು ವರ್ಷಗಳ ಹಿಂದೆ ನಿರ್ಮಿಸಿದ್ದು, ಲಕ್ಷಾಂತರ ಡಾಲರ್‌ ಹಣವನ್ನು ಹಮಾಸ್‌ ವಿನಿಯೋಗಿಸಿದೆ ಎಂದು ಇಸ್ರೇಲ್ ಹೇಳಿದೆ.

                ಗಾಜಾ ಯುದ್ಧದಲ್ಲಿ ನಾಗರಿಕರ ಸಾವಿನ ಸಂಖ್ಯೆ ದಿನೇ ದಿನೇ ಏರುತ್ತಿದೆ. ಯುದ್ಧ ಆರಂಭದಿಂದ ಭಾನುವಾರದವರೆಗೆ ಒಟ್ಟು 18,800 ಪ್ಯಾಲೆಸ್ಟೀನ್‌ ನಾಗರಿಕರು ಹತರಾಗಿದ್ದಾರೆ. ಭೂದಾಳಿ ಆರಂಭಿಸಿದ ಮೇಲೆ ಇಸ್ರೇಲ್‌ ಸೇನೆಯು 126 ಸೈನಿಕರನ್ನು ಕಳೆದುಕೊಂಡಿದೆ.

               ಗಾಜಾಪಟ್ಟಿಯಲ್ಲಿ ಬಾಂಬ್‌ ದಾಳಿಯಿಂದ ಆಸ್ಪತ್ರೆಗಳು, ಜನವಸತಿ, ರಸ್ತೆ ಮೂಲಸೌಕರ್ಯಗಳು ಧ್ವಂಸಗೊಂಡಿವೆ. ಸಾವಿರಾರು ಜನರು ನೆಲೆ ಕಳೆದುಕೊಂಡಿದ್ದು, ಆಹಾರ, ಕುಡಿಯುವ ನೀರು, ಇಂಧನ, ಸಂವಹನ ಸೌಲಭ್ಯಗಳಿಲ್ಲದೆ ದುಃಸ್ಥಿತಿಯಲ್ಲಿ ಸಿಲುಕಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಗಾಜಾಪಟ್ಟಿಯಲ್ಲಿ ತುರ್ತು ಕದನ ವಿರಾಮ ಘೋಷಿಸುವ ನಿರ್ಣಯ ಅಂಗೀಕರಿಸಲು ಸೋಮವಾರ ಮತ್ತೊಮ್ಮೆ ಸಭೆ ಸೇರಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries