HEALTH TIPS

'ವೀರ ಬಾಲ ದಿವಸ' ಆಚರಣೆ: ಪ್ರಧಾನಿ ಮೋದಿ ಭಾಗಿ

              ವದೆಹಲಿ: ಭಾರತ್ ಮಂಟಪದಲ್ಲಿ ಅದ್ಧೂರಿಯಾಗಿ 'ವೀರ ಬಾಲ ದಿವಸ' ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ಪಥಸಂಚಲನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಪ್ರಧಾನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

               ಸಿಖ್‌ ಗುರು ಗೋಬಿಂದ್ ಸಿಂಗ್ ಅವರ ಪುತ್ರರಾದ ಸಾಹಿಬ್‌ಜಾದಾಸ್ ಬಾಬಾ ಜೊರಾವರ್ ಸಿಂಗ್ ಮತ್ತು ಬಾಬಾ ಫತೇ ಸಿಂಗ್ ‌ ಅವರು ‌ ಹುತಾತ್ಮರಾದ ದಿನವನ್ನು (ಡಿಸೆಂಬರ್ 26) ವೀರ ಬಾಲ ದಿವಸ ಎಂದು ಆಚರಿಸಲಾಗುವುದು ಎಂದು 2022ರ ಜನವರಿ 9ರಂದು ಪ್ರಧಾನಿ ಮೋದಿ ಘೋಷಿಸಿದ್ದರು.

ಅದರಂತೆ ಇದೀಗ ಬಿಜೆಪಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

                ನವದೆಹಲಿಯ ಭಾರತ್ ಮಂಟಪದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕೇಂದ್ರ ಸಚಿವರಾದ ಅನುರಾಗ್ ಠಾಕೂರ್, ಸ್ಮೃತಿ ಇರಾನಿ, ಸೇರಿದಂತೆ ಇತರ ಸಚಿವರು ಭಾಗವಹಿಸಿದ್ದಾರೆ.

                ಪಕ್ಷದ ಕಾರ್ಯಕರ್ತರು ಸಾಮೂಹಿಕವಾಗಿ ಸ್ಥಳೀಯ ಗುರುದ್ವಾರಕ್ಕೆ ತೆರಳಿ ಕೀರ್ತನೆಯನ್ನು ಆಲಿಸಲು ನಿರ್ಧರಿಸಿದ್ದಾರೆ. ಅಲ್ಲದೇ ವೀರ ಬಾಲ ದಿವಸ ಕುರಿತಾದ ಚಿತ್ರವೊಂದು ರಾಷ್ಟ್ರವ್ಯಾಪಿ ಪ್ರದರ್ಶನಗೊಳ್ಳಲಿದೆ. MYBharat ಮತ್ತು MyGov ಪೋರ್ಟಲ್‌ಗಳ ಮೂಲಕ ಸಂವಾದಾತ್ಮಕ ರಸಪ್ರಶ್ನೆ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಆನ್‌ಲೈನ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries