HEALTH TIPS

ಭಾರತೀಯ ಬಾಹ್ಯಾಕಾಶ ಕೇಂದ್ರ: 2025ಕ್ಕೆ ಪ್ರಥಮ ಹಂತದ ಪರೀಕ್ಷೆ

             ರೀದಾಬಾದ್‌: 'ಮಹಾತ್ವಾಕಾಂಕ್ಷೆಯ ಭಾರತೀಯ ಬಾಹ್ಯಾಕಾಶ ಕೇಂದ್ರದ ಮೊದಲ ಹಂತದ ಪರೀಕ್ಷಾರ್ಥ ಪ್ರಯೋಗ 2025ರಲ್ಲಿ ನಡೆಯಲಿದೆ' ಎಂದು ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್ ಗುರುವಾರ ಇಲ್ಲಿ ಹೇಳಿದರು.

            ಬಾಹ್ಯಾಕಾಶದ ಕೇಂದ್ರದ ಪ್ರಥಮ ಮಾದರಿಯನ್ನು 2028ರಲ್ಲಿ ಉಡಾವಣೆ ಮಾಡುವ ಕುರಿತಂತೆ ಕ್ಷೇತ್ರದ ಪ್ರಮುಖರ ಜೊತೆಗೆ ಚರ್ಚೆ ನಡೆದಿದೆ ಎಂದು ಅವರು ತಿಳಿಸಿದರು.

             'ಆರಂಭಿಕ ಹಂತದ ಪರೀಕ್ಷಾ ಪ್ರಯೋಗವು ಮುಂದಿನ ವರ್ಷ ನಡೆಯಲಿದೆ. ಭಾರತೀಯ ಅಂತರಿಕ್ಷ ಕೇಂದ್ರದ ಸ್ವರೂಪ ಕುರಿತು ಮಂಗಳವಾರವಷ್ಟೇ ಪರಿಶೀಲನೆ ನಡೆಯಿತು. ಕೇಂದ್ರದ ಅಭಿವೃದ್ಧಿ ಕುರಿತಂತೆ ಉದ್ಯಮ ಪ್ರಮುಖರ ಜೊತೆ ಚರ್ಚೆ ನಡೆದಿದೆ. ಪ್ರಸ್ತುತ ಲಭ್ಯವಿರುವ ರಾಕೆಟ್‌ ಬಳಸಿಯೇ 2028ರಲ್ಲಿ ಅಂತರಿಕ್ಷ ಕೇಂದ್ರದ ಉಡ್ಡಯನ ನಡೆಯಲಿದೆ' ಎಂದರು.

              ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷದಲ್ಲಿ 2035ರ ಒಳಗೆ ಭಾರತೀಯ ಅಂತರಿಕ್ಷ ಕೇಂದ್ರ ಸ್ಥಾಪನೆ ಕುರಿತಂತೆ ಇಸ್ರೊಗೆ ಮಹತ್ವಾಕಾಂಕ್ಷೆಯ ಗುರಿಯನ್ನು ನಿಗದಿಪಡಿಸಿದ್ದರು.

ಮೊದಲು ಉಡಾವಣೆ ಮಾಡುವ ಕೇಂದ್ರವು ಮಾನವರಹಿತ ಆಗಿರುತ್ತದೆ. ಇನ್ನೊಂದೆಡೆ, 10 ಟನ್‌ ತೂಕದ ರಾಕೆಟ್‌ ಅಭಿವೃದ್ಧಿಪಡಿಸುವ ಕುರಿತು ಚಟುವಟಿಕೆ ನಡೆದಿದೆ. ದೀರ್ಘಾವಧಿ ಬಳಕೆಯ ಅಗತ್ಯವಿದ್ದಾಗ ರಾಕೆಟ್‌ ಅಭಿವೃದ್ಧಿ ಅಗತ್ಯ. ಈಗ ಅಂತಹ ಅಗತ್ಯ ಬಂದಿದೆ. ನಾವು ಚಂದಿರನಲ್ಲಿಗೆ ಮನುಷ್ಯನನ್ನು ಕಳುಹಿಸುವ ಯೋಜನೆ ಹೊಂದಿದ್ದೇವೆ. ಅಂತರಿಕ್ಷ ಕೇಂದ್ರ ಹೊಂದುವ ಯೋಜನೆಯೂ ಇದೆ. ಹೀಗಾಗಿ, ದೊಡ್ಡ ರಾಕೆಟ್‌ ಅಗತ್ಯವಿದೆ ಎಂದು ಇಸ್ರೊ ಅಧ್ಯಕ್ಷರು ಅಭಿಪ್ರಾಯಪಟ್ಟರು.

                  ಭಾರತ ಮತ್ತು ಅಮೆರಿಕ ನಡುವಣ ಒಪ್ಪಂದದ ಅನುಸಾರ, ಭಾರತೀಯ ಗಗನಯಾತ್ರಿಯೊಬ್ಬರು ಈ ವರ್ಷ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಯಾಣಿಸಲಿದ್ದಾರೆ. ಗಗನಯಾನ ಉದ್ದೇಶಕ್ಕಾಗಿ ತರಬೇತಿ ನೀಡಲಾಗಿರುವ ವಾಯುಪಡೆಯ ನಾಲ್ವರು ಪೈಲಟ್‌ಗಳಲ್ಲಿಯೇ ಒಬ್ಬರನ್ನು ಕಳುಹಿಸಬೇಕೇ ಎಂಬ ಬಗ್ಗೆ ನಿರ್ಧಾರವಾಗಿಲ್ಲ ಎಂದು ತಿಳಿಸಿದರು.

              ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕರೆದೊಯ್ಯಲು ಭಿನ್ನವಾದ ರಾಕೆಟ್‌ ಬಳಕೆಯಾಗುವುದರಿಂದ, ಹೀಗೆ ಆಯ್ಕೆಯಾದವರಿಗೆ ಅಮೆರಿಕದ ನಾಸಾದಲ್ಲಿ ಪ್ರತ್ಯೇಕ ತರಬೇತಿ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries