HEALTH TIPS

ಎಣ್ಮಕಜೆ ಗ್ರಾಮ ಪಂಚಾಯತು ಅಭಿವೃದ್ಧಿ ಸೆಮಿನಾರ್

                 ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ವಾರ್ಷಿಕ ಯೋಜನೆ ರಚನೆಯ ಅಂಗವಾಗಿ 2024-2025ನೇ ವಾರ್ಷಿಕ ಯೋಜನೆಗಳ  ಅಭಿವೃದ್ಧಿ ಸೆಮಿನಾರ್ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆಯಿತು.

              ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿ ಪಂಚಾಯತಿ ವ್ಯಾಪ್ತಿಯ ವಿವಿಧ  ಪ್ರದೇಶದ ಅಭಿವೃದ್ಧಿ, ಕೃಷಿ, ಶೈಕ್ಷಣಿಕ ಹಾಗೂ ಆರೋಗ್ಯ ರಂಗದ ಪುರೋಗತಿಗೆ ಅನುಕೂಲಕರವಾದ ರೂಪುರೇಷೆ ರಚಿಸುವ ಅಭಿವೃದ್ಧಿಯನ್ನು ಪಂಚಾಯತಿ ಕೈಗೊಂಡಿದ್ದು ಇದರ ಯಶಸ್ಸಿನಲ್ಲಿ ಪ್ರತಿ ಜನಪ್ರತಿನಿಧಿಗಳ ಪಾತ್ರ ಮಹತ್ತರವಾದುದೆಂದರು. 

              ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್ ಸಭೆಯ ಅಧ್ಯಕ್ಷತೆವಹಿಸಿದ್ದರು. ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ  ಜಯಶ್ರೀ ಎ.ಕುಲಾಲ್, ಪಂಚಾಯತಿ ಯೋಜನಾ  ಸಮಿತಿ ಅಧ್ಯಕ್ಷೆ ಆಯಿμÁ ಎ.ಎ.,ಪಂ.ಕಾರ್ಯದರ್ಶಿ ಹಂಸಾ ಮೊದಲಾದವರು ಮಾತನಾಡಿದರು.

            ವಿವಿಧ ವಾರ್ಡ್ ಸದಸ್ಯರಾದ ಮಹೇಶ್ ಭಟ್, ಶಶಿಧರ್, ರಾಮಚಂದ್ರ ಎಂ, ನರಸಿಂಹ ಪೂಜಾರಿ, ರೂಪವಾಣಿ ಆರ್.ಭಟ್, ರಾಧಾಕೃಷ್ಣ ನಾಯಕ್,ಕುಸುಮಾವತಿ, ಝರಿನಾ ಎಂ, ಉμÁ, ಆಶಾಲತ,ಇಂದಿರಾ,ರಮ್ಲ  ಮೊದಲಾದವರು ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries