ತಿರುವನಂತಪುರಂ: ಕೊಲ್ಲಂ ಪರವೂರ್ ಮುನ್ಸಿಫ್/ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಅನಿಸಿಯಾ (44) ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.
ಕೊಲ್ಲಂ ಸಿಟಿ ಟ್ರೆಕಂ ಬ್ರಾಂಚ್ ಡಿವೈಎಸ್ಪಿ ತನಿಖೆಯ ಉಸ್ತುವಾರಿ ವಹಿಸಿದ್ದಾರೆ. ಭಾನುವಾರ ಬೆಳಗ್ಗೆ ಅನಿಸಿಯಾ ಸ್ನಾನಗೃಹದ ಕಿಟಕಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಉಳಿಸಲು ಸಾಧ್ಯವಾಗಲಿಲ್ಲ.
ಅನಿಸಿಯಾ ಆತ್ಮಹತ್ಯೆಯಲ್ಲಿ ಆಕೆಯ ಸಹೋದ್ಯೋಗಿ ಮತ್ತು ಮೇಲಧಿಕಾರಿಗಳ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಸಾಯುವ ಮುನ್ನ ಅವರ ಧ್ವನಿಮುದ್ರಿಕೆ ಹಾಗೂ ಆತ್ಮಹತ್ಯೆ ಪತ್ರದಲ್ಲಿ ಇಬ್ಬರ ವಿರುದ್ಧವೂ ಆರೋಪಗಳಿದ್ದವು. ಅನಿಶಿಯಾ ಆತ್ಮಹತ್ಯೆಗೆ ಶರಣಾಗಿ ಮೂರು ದಿನ ಕಳೆದರೂ ಪೋಲೀಸರು ಆರೋಪಿಗಳನ್ನು ಬಂಧಿಸಿಲ್ಲ. ಅನಿಸಿಯಾ ಅವರು 19 ಪುಟಗಳ ಆತ್ಮಹತ್ಯೆ ಪತ್ರದಲ್ಲಿ ಉಪ ನಿರ್ದೇಶಕರು ಮತ್ತು ಸಹೋದ್ಯೋಗಿ ಎಪಿಪಿ ಅವರ ಹೆಸರನ್ನು ಬರೆದಿದ್ದಾರೆ. ಕೆಲಸ ಮಾಡಲು ಅವಕಾಶವಿಲ್ಲ ಎಂದು ಅನಿಸಿಯಾ ತನ್ನ ಸ್ನೇಹಿತರಿಗೆ ಕಳುಹಿಸಿರುವ ವಾಟ್ಸಾಪ್ ಸಂದೇಶವೂ ಪ್ರಮುಖ ಸಾಕ್ಷಿಯಾಗಿದೆ. ಇμÉ್ಟಲ್ಲ ಸಿಕ್ಕರೂ ಪೋಲೀಸರು ಆರೋಪಿಗಳ ಹೇಳಿಕೆಯನ್ನೂ ದಾಖಲಿಸಿಕೊಂಡಿಲ್ಲ.
ಅನಿಸಿಯಾ ಅವರ ಪತಿ ಅಜಿತಕುಮಾರ ಮಾವೇಲಿಕರ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು. ಆದರೆ, ವಕೀಲರ ನಿಧನದ ನಂತರ ಹಲವು ವಕೀಲರ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಆರೋಪಕ್ಕೆ ಮುಂದಾಗಿದ್ದವು. ಇದಾದ ಬಳಿಕ ಪ್ರಕರಣವನ್ನು ಕ್ರೈಂಬ್ರಾಂಚಿಗೆ ವರ್ಗಾಯಿಸುವ ನಿರ್ಧಾರ ಕೈಗೊಳ್ಳಲಾಯಿತು.





