HEALTH TIPS

ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಆದ್ಯತೆ; ಲಂಡನ್ ತಲುಪಿದ ರಾಜನಾಥ್ ಸಿಂಗ್

              ಲಂಡನ್‌: ಬ್ರಿಟನ್‌ಗೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರು ಸೋಮವಾರ ಲಂಡನ್‌ ತಲುಪಿದ್ದಾರೆ. ಇದರೊಂದಿಗೆ, ಭಾರತದ ರಕ್ಷಣಾ ಸಚಿವರೊಬ್ಬರು 22 ವರ್ಷಗಳ ನಂತರ ಬ್ರಿಟನ್‌ಗೆ ಭೇಟಿ ನೀಡಿದಂತಾಗಿದೆ.

             ಭಾರತ-ಬ್ರಿಟನ್‌ ದ್ವಿಪಕ್ಷೀಯ ಸಂಬಂಧ ವೃದ್ಧಿ ಉದ್ದೇಶದಿಂದ ಕೈಗೊಳ್ಳಲಾಗಿರುವ ಈ ಭೇಟಿ ಸಂದರ್ಭದಲ್ಲಿ ರಕ್ಷಣಾ ಇಲಾಖೆ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಹಿರಿಯ ಅಧಿಕಾರಿಗಳನ್ನೊಳಗೊಂಡ ನಿಯೋಗ ಸಿಂಗ್‌ ಅವರೊಂದಿಗೆ ಇದೆ.

ರಕ್ಷಣಾ ಕ್ಷೇತ್ರದಲ್ಲಿ ಉಭಯ ದೇಶಗಳ ಪಾಲುದಾರಿಕೆ, ಭದ್ರತೆ ಮತ್ತು ಕೈಗಾರಿಕಾ ಸಹಕಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಯಲಿದೆ.

               ಸಿಂಗ್‌ ಅವರು, ಬ್ರಿಟನ್‌ ರಕ್ಷಣಾ ಸಚಿವ ಗ್ರಾಂಟ್‌ ಶಾಪ್ಸ್‌ ಅವರೊಂದಿಗೆ ಸಭೆ ನಡೆಸುವುದಷ್ಟೇ ಅಲ್ಲದೆ, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಡೇವಿಡ್ ಕ್ಯಾಮರೂನ್‌ ಅವರೊಂದಿಗೂ ಮಾತುಕತೆ ನಡೆಸುವ ನಿರೀಕ್ಷೆ ಇದೆ.

              ರಕ್ಷಣಾ ಸಚಿವರು ರಕ್ಷಣೆ, ಭದ್ರತೆ ಮತ್ತು ಕೈಗಾರಿಕೆ ಸಹಕಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲಿದ್ದಾರೆ. ಇಂಡೊ-ಪೆಸಿಫಿಕ್‌, ಪಶ್ಚಿಮ ಏಷ್ಯಾ ಮತ್ತು ಉಕ್ರೇನ್‌ ಸ್ಥಿತಿಗತಿ ಕುರಿತೂ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

               ಯುದ್ಧ ವಿಮಾನಗಳು ಮತ್ತು ಇತರೆ ಸೇನಾ ಸಲಕರಣೆಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕುವ ಸಾಧ್ಯತೆ ಇದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries