HEALTH TIPS

ನ್ಯೂ ಹ್ಯಾಂಪ್‌ಶೈರ್‌: ಟ್ರಂಪ್‌ಗೆ ಗೆಲುವು, ನಿಕ್ಕಿ ಹ್ಯಾಲೆಗೆ ಸೋಲು

              ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಆಯ್ಕೆ ಸಂಬಂಧ ನ್ಯೂ ಹ್ಯಾಂಪ್‌ಶೈರ್‌ನಲ್ಲಿ ನಡೆದ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಭಾರತೀಯ ಮೂಲದ ರಾಜಕಾರಣಿ ನಿಕ್ಕಿ ಹ್ಯಾಲೆ ಅವರನ್ನು ಸೋಲಿಸಿದ್ದಾರೆ.

              ಈ ಮೂಲಕ ಪಕ್ಷದ ಅಭ್ಯರ್ಥಿಯಾಗುವ ನಿಟ್ಟಿನಲ್ಲಿ ಅವರು ಮುನ್ನಡೆ ಹೆಚ್ಚಿಸಿಕೊಂಡಿದ್ದಾರೆ.

ಟ್ರಂಪ್‌ ಅವರು ಶೇ 55ರಷ್ಟು ಮತಗಳನ್ನು ಪಡೆದರೆ, ಅವರ ಎದುರಾಳಿ ‌ಹ್ಯಾಲೆ ಶೇ 44ರಷ್ಟು              ಮತಗಳನ್ನು ಪಡೆದರು.

             ಕಳೆದ ವಾರ ಅಯೋವಾ ರಾಜ್ಯದಲ್ಲಿ ನಡೆದಿದ್ದ ಚುನಾವಣೆಯಲ್ಲಿ ಟ್ರಂಪ್‌ ಅವರು, ಭಾರತೀಯ ಮೂಲದ ಅಮೆರಿಕದ ಉದ್ಯಮಿ ವಿವೇಕ್‌ ರಾಮಸ್ವಾಮಿ ಅವರನ್ನು ಸೋಲಿಸಿದ್ದರು. ಸುಮಾರು 91 ಕ್ರಿಮಿನಲ್‌ ಆರೋಪಗಳನ್ನು ಎದುರಿಸುತ್ತಿರುವುದರ ನಡುವೆಯೂ ಅವರ ಗೆಲುವು ಗಮನಾರ್ಹವಾಗಿದೆ.


                ದಕ್ಷಿಣ ಕೆರೊಲಿನಾದ ಮಾಜಿ ಗವರ್ನರ್‌ ನಿಕ್ಕಿ ಹ್ಯಾಲೆ ಅವರು, ಮಂಗಳವಾರ ರಾತ್ರಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಟ್ರಂಪ್‌ ವಿರುದ್ಧ ಹರಿಹಾಯ್ದಿದ್ದರು. ಟ್ರಂಪ್‌ ಅವರ ಮಾನಸಿಕ ಸಾಮರ್ಥ್ಯವನ್ನು ಪ್ರಶ್ನಿಸಿದ್ದ ಅವರು, ಅವರನ್ನು ಮರುನಾಮಕರಣ ಮಾಡಿದರೆ ಪಕ್ಷವು ಸೋಲಬಹುದು ಎಂದು ಎಚ್ಚರಿಸಿದ್ದರು.

               ಫಲಿತಾಂಶದ ಬಳಿಕ, ಟ್ರಂಪ್‌ ಅವರನ್ನು ಅಭಿನಂದಿಸಿದ ಹ್ಯಾಲೆ, 'ಅವರು ಇದನ್ನು ಗಳಿಸಿದ್ದಾರೆ ಎನ್ನುವುದೇನೋ ನಿಜ. ಆದರೆ, ಇಲ್ಲಿಗೇ ಎಲ್ಲವೂ ಮುಗಿದಿಲ್ಲ. ಇನ್ನೂ ಡಜನ್‌ಗಟ್ಟಲೆ ರಾಜ್ಯಗಳು ಬಾಕಿ ಇವೆ' ಎಂದು ಪ್ರತಿಕ್ರಿಯಿಸಿದರು. ರಿಪಬ್ಲಿಕನ್‌ ನಾಮ ನಿರ್ದೇಶನ ಸ್ಪರ್ಧೆಯಲ್ಲಿ ಟ್ರಂಪ್‌ ಅವರ ಕೊನೆಯ ಪ್ರತಿಸ್ಪರ್ಧಿಯಾಗಿ ನಿಕ್ಕಿ ಆಗಿದ್ದಾರೆ.

            'ನಿಕ್ಕಿ ಹ್ಯಾಲೆ ಅವರು ಭ್ರಮೆಯಲ್ಲಿದ್ದಾರೆ. ಸೋತಾಗಲೂ ಅವರು ಗೆದ್ದಂತೆ ಭಾಷಣ ಮಾಡಿದ್ದಾರೆ' ಎಂದು ಟ್ರಂಪ್‌ ಕುಟುಕಿದ್ದಾರೆ.

                 'ಡೊನಾಲ್ಡ್‌ ಟ್ರಂಪ್‌ ಅವರಿಗೆ ನಿರ್ಣಾಯಕ ಗೆಲುವು ದೊರೆತಿದೆ' ಎಂದಿರುವ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ವಿವೇಕ್‌ ರಾಮಸ್ವಾಮಿ ಅವರು, 'ಹ್ಯಾಲೆ ಅವರು ಸ್ಪರ್ಧೆಯಿಂದ ಹಿಂದೆ ಸರಿಯಬೇಕು' ಎಂದು ಆಗ್ರಹಿಸಿದ್ದಾರೆ.

---

ಪ್ರಚಾರದ ವೇಳೆ ಹ್ಯಾಲೆಗೆ ವಿವಾಹದ ಪ್ರಸ್ತಾವ

            ನ್ಯೂ ಹ್ಯಾಂಪ್‌ಶೈರ್ ರ್‍ಯಾಲಿಯಲ್ಲಿ ಪ್ರಚಾರದಲ್ಲಿ ತೊಡಗಿದ್ದ ಭಾರತೀಯ- ಅಮೆರಿಕನ್‌ ನಿಕ್ಕಿ ಹ್ಯಾಲೆ ಅವರಿಗೆ ಟ್ರಂಪ್‌ ಬೆಂಬಲಿಗರೊಬ್ಬರು ವಿವಾಹದ ಪ್ರಸ್ತಾವವನ್ನು ಮುಂದಿಟ್ಟು, ಛೇಡಿಸಿದರು.

52 ವರ್ಷದ ಹ್ಯಾಲೆ ಅವರು ಸಲೇಂನ ಆರ್ಟಿಸನ್‌ ಹೋಟೆಲ್‌ನಲ್ಲಿ ತಮ್ಮ ಬೆಂಬಲರೊಂದಿಗೆ ಮಾತನಾಡುತ್ತಿದ್ದರು. ಆಗ ಟ್ರಂಪ್‌ ಬೆಂಬಲಿಗರು, 'ನೀವು ನನ್ನನ್ನು ವಿವಾಹವಾಗುವಿರಾ?' ಎಂದು ಕಿಚಾಯಿಸಿದರು. ಆಗ ಹ್ಯಾಲೆ ವ್ಯಂಗ್ಯವಾಗಿ ನಗುತ್ತಾ, 'ನೀವು ನನಗೆ ಮತ ಹಾಕುತ್ತೀರಾ' ಎಂದು ತಕ್ಷಣವೇ ಆ ವ್ಯಕ್ತಿಯನ್ನು ಕೇಳಿದರು. ಆಗ ಆತ 'ನಾನು ಟ್ರಂಪ್‌ಗೆ ಮತ ಹಾಕುತ್ತೇನೆ' ಎಂದಾಗ, 'ಹಾಗಾದರೆ, ಇಲ್ಲಿಂದ ಹೊರಡು' ಎಂದು ಹ್ಯಾಲೆ ಹೇಳಿದರು. 'ನ್ಯೂಯಾರ್ಕ್‌ ಪೋಸ್ಟ್‌' ಈ ಸಂಗತಿಯನ್ನು ವರದಿ ಮಾಡಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries