ತಿರುವನಂತಪುರಂ: ಶಬರಿಮಲೆ ಯಾತ್ರೆ ವೇಳೆ ಅಯ್ಯಪ್ಪ ಭಕ್ತರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಹೇಳಿದ್ದಾರೆ.
ಮುಂದಿನ ಅವಧಿಯ ಉತ್ಸವದ ವೇಳೆ ನ್ಯೂನತೆಗಳನ್ನು ಸರಿಪಡಿಸಲಾಗುವುದು. ºಈ ಬಾರಿಯ ಆದಾಯ 357.47 ಕೋಟಿ ರೂ.ಸಂಗ್ರಹವಾಗಿದೆ. ಈ ಬಾರಿ ಹೆಚ್ಚುವರಿಯಾಗಿ ಐದು ಲಕ್ಷ ಭಕ್ತರು ಬಂದಿದ್ದರು. ಮಕ್ಕಳ ಸಂಖ್ಯೆಯಲ್ಲೂ ಹೆಚ್ಚಳವಿತ್ತು ಎಂದು ಮಾಹಿತಿ ನೀಡಿದರು.
ಪತ್ರಕರ್ತರ ಸಂಘದ ತಿರುವನಂತಪುರ ಜಿಲ್ಲಾ ಸಮಿತಿ ಆಯೋಜಿಸಿದ್ದ ಮುಖಾಮುಖಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅನುಭವಿ ಪೋಲೀಸರು ಇಲ್ಲದಿರುವುದೇ 18ನೇ ಮೆಟ್ಟಲಲ್ಲಿ ನೂಕು ನುಗ್ಗಲಿಗೆ ಕಾರಣವಾಯಿತು. ಅಯ್ಯಪ್ಪ ಭಕ್ತರು ಶಬರಿಮಲೆಗೆ ಭೇಟಿ ನೀಡದೆ ಪಂದಳಂ ತಲುಪಿ ಬೆಟ್ಟ ಏರದೆ ಮಲೆಯಲ್ಲಿ ಜನಸಂದಣಿ, ಗಲಿಬಿಲಿ ಇದೆ ಎಂದು ಉದ್ದೇಶಪೂರ್ವಕವಾಗಿ ಪ್ರಚಾರ ಮಾಡಿದಂತೆ ತೋಚಿದೆ. ತಿರುವಾಂಕೂರು ದೇವಸ್ವಂ ಮಂಡಳಿಯ 1252 ದೇವಾಲಯಗಳಲ್ಲಿ ಒಂಬತ್ತು ದೇವಾಲಯಗಳು ಗಮನಾರ್ಹ ಆದಾಯವನ್ನು ಹೊಂದಿವೆ. ಈ ದೇವಸ್ಥಾನಗಳಿಂದ ಬರುವ ಆದಾಯದಿಂದಲೇ ಇತರೆ ದೇವಸ್ಥಾನಗಳ ನಿತ್ಯ ವ್ಯವಸ್ಥೆಗಳು ನಡೆದುಬರುತ್ತಿದೆ ಎಂದು ಪಿ.ಎಸ್. ಪ್ರಶಾಂತ್ ಹೇಳಿದರು.





