HEALTH TIPS

ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ 'ಉಗ್ರಂ' ರೈಫಲ್‌ ಅನಾವರಣ

             ಪುಣೆ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಖಾಸಗಿ ಕಂಪನಿಯ ಜೊತೆ ಸೇರಿ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಅಸಾಲ್ಟ್‌ ರೈಫಲ್‌ 'ಉಗ್ರಂ'ನ ಅನ್ನು ಸೋಮವಾರ ಅನಾವರಣಗೊಳಿಸಲಾಯಿತು.

            ಡಿಆರ್‌ಡಿಒದ ಪುಣೆಯಲ್ಲಿರುವ ಪ್ರಯೋಗಾಲಯದಲ್ಲಿ ಈ ರೈಫಲ್‌ ಅನ್ನು ವಿನ್ಯಾಸಗೊಳಿಸಲಾಗಿದೆ.

                ಎ ಆಯಂಡ್‌ ಸಿ ಎಂಜಿನಿಯರಿಂಗ್‌ ಕ್ಲಸ್ಟರ್‌ನ ಮಹಾ ನಿರ್ದೇಶಕ ಡಾ.ಎಸ್‌.ವಿ.ಗಾಡೆ ಅವರು ರೈಫಲ್‌ ಅನಾವರಣಗೊಳಿಸಿದರು.

               'ಅಂತರರಾಷ್ಟ್ರೀಯ ಗುಣಮಟ್ಟ ಮಾನದಂಡಗಳಿಗೆ ಅನುಸಾರವಾಗಿ ಈ ರೈಫಲ್‌ ಅನ್ನು ದೇಶೀಯವಾಗಿ ನಿರ್ಮಿಸಲಾಗಿದೆ' ಎಂದು ಶಸ್ತ್ರಾಸ್ತ್ರ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ(ಎಆರ್‌ಡಿಇ) ನಿರ್ದೇಶಕ ಎ.ರಾಜು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries