ಬಾಲೇಶ್ವರ (PTI): ಲೋಕಸಭಾ ಚುನಾವಣೆಯಲ್ಲಿ ತಾವು ಒಡಿಶಾದ ಬಾಲೇಶ್ವರ ಕ್ಷೇತ್ರದಿಂದ ಕಣಕ್ಕೆ ಇಳಿಯುವುದಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಸ್ಪಷ್ಟಪಡಿಸಿದ್ದಾರೆ.
0
samarasasudhi
ಜನವರಿ 15, 2024
ಬಾಲೇಶ್ವರ (PTI): ಲೋಕಸಭಾ ಚುನಾವಣೆಯಲ್ಲಿ ತಾವು ಒಡಿಶಾದ ಬಾಲೇಶ್ವರ ಕ್ಷೇತ್ರದಿಂದ ಕಣಕ್ಕೆ ಇಳಿಯುವುದಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಸ್ಪಷ್ಟಪಡಿಸಿದ್ದಾರೆ.
ಈಗ ರಾಜ್ಯಸಭಾ ಸದಸ್ಯ ಆಗಿರುವ ವೈಷ್ಣವ್ ಅವರನ್ನು ಬಿಜೆಪಿಯು ಬಾಲೇಶ್ವರದಿಂದ ಕಣಕ್ಕೆ ಇಳಿಸಬಹುದು ಎಂಬ ಊಹಾಪೋಹಗಳು ಇದ್ದವು.
ಈಗ ಬಿಜೆಪಿಯ ಪ್ರತಾಪ್ ಸಾರಂಗಿ ಅವರು ಬಾಲೇಶ್ವರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 'ಇಲ್ಲಿ ಪ್ರತಾಪ್ ಇದ್ದಾರೆ. ನಾನು ಇಲ್ಲಿಂದ ಸ್ಪರ್ಧಿಸುವುದಿಲ್ಲ' ಎಂದು ವೈಷ್ಣವ್ ಅವರು ಹೇಳಿದರು. ಇಲ್ಲಿನ ರೈಲು ನಿಲ್ದಾಣದ ಫಲಕಗಳಲ್ಲಿ ಇರುವ 'ಬಾಲಾಸೋರ್' ಹೆಸರನ್ನು 'ಬಾಲೇಶ್ವರ' ಎಂದು ಬದಲಿಸುವಂತೆ ವೈಷ್ಣವ್ ಅವರು ಅಧಿಕಾರಿಗಳಿಗೆ ಭಾನುವಾರ ಸೂಚಿಸಿದರು.