ಕೊಲ್ಲಂ: ನಗರದ ಪಟ್ಟತ್ತಣಂ ಪ್ರದೇಶದ ಮನೆಯೊಂದರಲ್ಲಿ 35 ವರ್ಷದ ವ್ಯಕ್ತಿ ಮತ್ತಾತನ ಇಬ್ಬರು ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರನ್ನು ಜೋಸ್ ಪ್ರಮೋದ್, ದೇವನಾರಾಯಣನ್ (9) ಮತ್ತು ದೇವಾನಂದ (7) ಎಂದು ಗುರುತಿಸಲಾಗಿದೆ.
0
samarasasudhi
ಜನವರಿ 13, 2024
ಕೊಲ್ಲಂ: ನಗರದ ಪಟ್ಟತ್ತಣಂ ಪ್ರದೇಶದ ಮನೆಯೊಂದರಲ್ಲಿ 35 ವರ್ಷದ ವ್ಯಕ್ತಿ ಮತ್ತಾತನ ಇಬ್ಬರು ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರನ್ನು ಜೋಸ್ ಪ್ರಮೋದ್, ದೇವನಾರಾಯಣನ್ (9) ಮತ್ತು ದೇವಾನಂದ (7) ಎಂದು ಗುರುತಿಸಲಾಗಿದೆ.
ಪ್ರಮೋದ್‌ನ ಮಾವ ಇಂದು ಬೆಳಗ್ಗೆ ಮನೆಗೆ ಬಂದಾಗ ಬಾಗಿಲಿಗೆ ಒಳಗಿನಿಂದ ಲಾಕ್ ಮಾಡಿರುವುದು ಹಾಗೂ ಯಾರೂ ಸ್ಪಂದಿಸದೇ ಇರುವುದನ್ನು ಕಂಡು ನೆರೆಹೊರೆಯವರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಆಗಮಿಸಿ ಬಾಗಿಲನ್ನು ಒಡೆದು ಒಳ ಹೋದಾಗ ಮಕ್ಕಳ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿದ್ದರೆ ಪ್ರಮೋದ್ ಮೃತದೇಹ ಇನ್ನೊಂದು ಕೋಣೆಯಲ್ಲಿ ಪತ್ತೆಯಾಗಿದೆ.
ಪ್ರಮೋದ್ ಪತ್ನಿ ವೈದ್ಯೆಯಾಗಿದ್ದು ಘಟನೆ ನಡೆದಾಗ ಕರ್ತವ್ಯದಲ್ಲಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಪ್ರಮೋದ್ ತನ್ನಿಬ್ಬರು ಮಕ್ಕಳನ್ನು ಕೊಂದು ನಂತರ ಆತ್ಮಹತ್ಯೆಗೈದಿರಬೇಕೆಂದು ಶಂಕಿಸಲಾಗಿದೆ. ಘಟನೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಪೊಲೀಸ್ ತನಿಖೆ ಮುಂದುವರಿದಿದೆ.