HEALTH TIPS

ಪ್ರತಿದಿನ 12-14 ಗಂಟೆ ಉಪವಾಸ ಮಾಡಿದರೆ ದೇಹದ ಮೇಲಾಗುವ ಪ್ರಭಾವವೇನು?

 ಎಲ್ಲಾ ಧರ್ಮದಲ್ಲಿ ಕೆಲವೊಂದು ಸಂದರ್ಭದಲ್ಲಿ ಉಪವಾಸ ಆಚರಣೆ ಇರುತ್ತದೆ, ಇದೊಂದು ಆಚರಣೆಯಂತೆ ಜನರು ಆಚರಿಸುತ್ತಾರೆ, ಆದರೆ ಈ ಉಪವಾಸದಿಂದ ಮಾಡುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇನ್ನು ಕೆಲವರು ಮೈ ತೂಕ ನಿಯಂತ್ರಣಕ್ಕೆ ಉಪವಾಸ ಮಾಡುತ್ತಾರೆ, ಅದನ್ನು ಇಂಟರ್‌ಮೀಡಿಯೆಟ್‌ ಫಾಸ್ಟಿಂಗ್ ಎಂದು ಕರೆಯುತ್ತಾರೆ.


ಇನ್ನು ನೀವು ರಾತ್ರಿ 7 ಗಂಟೆಯ ಒಳಗಡೆ ಸೇವಿಸಬೇಕು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ, ಬೆಳಗ್ಗೆ 7 ಗಂಟೆಗೆ ತಿಂದರೆ ಇನ್ನು ತಿನ್ನುವುದು ಬೆಳಗ್ಗೆ 8-9 ಗಂಟೆಗೆ. ಈ ರೀತಿ ಮಾಡುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ಹೇಳಲಾಗುವುದು. ಆರೋಗ್ಯ ತಜ್ಞರು ನೀವು 14 ಗಂಟೆ ಉಪವಾಸ ಮಾಡುವುದು ಒಳ್ಳೆಯದು ಎಂದು ಹೇಳುತ್ತಾರೆ. ಈ 14 ಗಂಟೆ ಉಪವಾಸ ಮಾಡುವುದರಿಂದ ದೇಹದ ಮೇಲಾಗುವ ಪ್ರಭಾವವೇನು ಎಂದು ನೋಡೋಣ ಬನ್ನಿ:

ಕೊಬ್ಬು ಕರಗುವುದು

ನೀವು 12-14 ಗಂಟೆ ಉಪವಾಸ ಮಾಡಿದಾಗ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬಿನಂಶ ಕರಗುವುದು. ಏಕೆಂದರೆ ಈ ರೀತಿ 12-14 ಗಂಟೆ ಏನೂ ತಿನ್ನದಿದ್ದರೆ ಲಿವರ್‌ ಕೆಟೊನೆ ಉತ್ಪತ್ತಿ ಮಾಡುತ್ತದೆ. ಇದು ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು ಕರಗಿಸುವುದು ಹಾಗೂ ಮೆದುಳು ಹಾಗೂ ಸ್ನಾಯುಗಳಿಗೆ ಶಕ್ತಿ ತುಂಬುವುದು.

ಮಧುಮೇಹಿಗಳಿಗೆ ಒಳ್ಳೆಯದು ನೀವು 14 ಗಂಟೆ ಉಪವಾಸ ಮಾಡುವುದರಿಂದ ಮಧುಮೇಹ ತಡೆಗಟ್ಟಲು, ಮಧುಮೇಹವಿದ್ದರಿಗೆ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿ. ಏಕೆಂದರೆ ಚಯಪಚಯ ಕ್ರಿಯೆ ಉತ್ಪತ್ತಿಯಾಗುವುದು, ಇದರಿಂದ ಸ್ನಾಯುಗಳು ಹಾನಿಯಾಗಿದ್ದರೆ ಅದು ಸರಿಯಾಗಲು ಸಹಕಾರಿ. 
ಕ್ಯಾನ್ಸರ್‌ನಂಥ ಅಪಾಯ ತಡೆಗಟ್ಟುತ್ತದೆ ನೀವು ಸಂಜೆ ಊಟ ಮಾಡಿ ರಾತ್ರಿ ಏನೂ ತಿನ್ನದೆ ಇದ್ದರೆ ಆರೋಗ್ಯಕ್ಕೆ ಒಳ್ಳೆಯದು, ಇದರಿಂದ ಜೀವಕಣಗಳಿಗೆ ಒಳ್ಳೆಯದು ಹಾಗೂ ಕ್ಯಾನ್ಸರ್ ಹಾಗೂ ಮತ್ತಿತರ ಆರೋಗ್ಯ ಸಂಬಂಧಿಸಿದ ಸಮಸ್ಯೆ ತಡೆಗಟ್ಟಲು ಸಹಕಾರಿ.
ಹಾರ್ಮೋನ್‌ಗಳನ್ನು ಸಮತೋಲನದಲ್ಲಿಡುತ್ತದೆ ದಿನದಲ್ಲಿ 12-14 ಗಂಟೆ ಉಪವಾಸ ಇರುವುದರಿಂದ ದೇಹದಲ್ಲಿ ಹಾರ್ಮೋನ್‌ಗಳು ಸಮತೋಲನದಲ್ಲಿರುತ್ತದೆ. ಏಕೆಂದರೆ ನಾವು ಇಷ್ಟು ಹೊತ್ತು ಉಪವಾಸವಿದ್ದರೆ ಚಯಪಚಯ ಕ್ರಿಯೆ ಉತ್ತಮವಾಗುವುದು. 
ಉರಿಯೂತದ ಸಮಸ್ಯೆ ಕಡಿಮೆಯಾಗುವುದು ಉರಿಯೂತದ ಸಮಸ್ಯೆ ಬಂದರೆ ತುಂಬಾನೇ ಅಸ್ವಸ್ಥತೆ ಕಾಡುವುದು, ಅದನ್ನು ತಡೆಗಟ್ಟಲು ಇದು ಸಹಕಾರಿ. ಏಕೆಂದರೆ ಈ ರೀತಿ ಉಪವಾಸವಿದ್ದಾಗ ಉರಿಯೂತದ ಸಮಸ್ಯೆ ಉಂಟು ಮಾಡುವ ಸಿ ಕ್ರಿಯೇಟಿವ್‌ ಪ್ರೊಟೀನ್‌ ಹಾಗೂ ಇಂಟರ್‌ಲೆಕ್ಯೂನ್ ಕಡಿಮೆಯಾಗುವುದು, ಆದ್ದರಿಂದ ಉರಿಯೂತದ ಸಮಸ್ಯೆ ತಡೆಗಟ್ಟಲು ಸಹಕಾರಿ.
 ಮೈ ತೂಕ ನಿಯಂತ್ರಣದಲ್ಲಿಡಲು ಸಹಕಾರಿ ನೀವು ಹೀಗೆ ಪ್ರತಿನಿತ್ಯ 12-14 ಗಂಟೆ ಉಪವಾಸ ಮಾಡುವುದರಿಂದ ಮೈ ತೂಕ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಇದನ್ನು ತುಂಬಾ ಸೆಲೆಬ್ರಿಟಿಗಳು ಅನುಸರಿಸುತ್ತಿದ್ದಾರೆ, ಅವರು 7 ಗಂಟೆಯ ಮೊದಲೇ ಆಹಾರ ಸೇವಿಸಿ ತೂಕ ನಿಯಂತ್ರಣ ಮಾಡುತ್ತಿದ್ದಾರೆ.

ಈ ರೀತಿ ಪ್ರತಿನಿತ್ಯ ಉಪವಾಸ ಮಾಡುವುದರಿಂದ ತೊಂದರೆ ಇದೆಯೇ? ಏನೂ ತೊಂದರೆಯಿಲ್ಲ, ಏಕೆಂದರೆ ನೀವು ಸಂಪೂರ್ಣ ಉಪವಾಸ ಮಾಡುವುದಿಲ್ಲ, ನಿಮ್ಮ ಆಹಾರವನ್ನು ಮಾಮೂಲಿ ರೀತಿಯೇ ಸೇವಿಸಬಹುದು. ಆದರೆ ಸ್ವಲ್ಪ ಬೇಗ ಅಂದರೆ 7 ಗಂಟೆಯ ಒಳಗಡೆ ಸೇವಿಸಿ, ಹೀಗೆ ಆಹಾರ ಸೇವಿಸುವುದರಿಂದ ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ 12-1 ಗಂಟೆ ಬ್ರೇಕ್ ಸಿಗುತ್ತೆ, ಈ ವಿಧಾನ ಟ್ರೈ ಮಾಡಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ನೀವು 12 ಗಂಟೆ ಉಪವಾಸವನ್ನು ರಾತ್ರಿ ಹೊತ್ತಿನಲ್ಲಿ ಮಾಡಿ ಹಗಲಿನಲ್ಲಿ ಮಾಡಿದರೆ ಸುಸ್ತಾಗುವುದು, ಅಲ್ಲದೆ ರಾತ್ರಿ ಹೊಟ್ಟೆ ತುಂಬಾ ತಿಂದು ಒಳ್ಳೆಯದಲ್ಲ, ಬದಲಿಗೆ ಬೆಳಗ್ಗೆ, ಮಧ್ಯಾಹ್ನ ಚೆನ್ನಾಗಿ ತಿಂದು ಸಂಜೆ ಸ್ವಲ್ಪ ಆಹಾರ ಸೇವಿಸಿ.



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries