HEALTH TIPS

ಜಪಾನ್‌: ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಮುಳುಗಿದ ಹಡಗು; 24 ಮೀನುಗಾರರ ರಕ್ಷಣೆ

          ಟೋಕಿಯೊ: ಜಪಾನ್ ರಾಜಧಾನಿ ಟೋಕಿಯೊದ ನೈರುತ್ಯ ಭಾಗದ ದ್ವೀಪ ಪ್ರದೇಶದ ಸಮುದ್ರದಲ್ಲಿ ಬೃಹತ್ ಅಲೆಗಳು ಎದ್ದಿದ್ದರಿಂದ ನೀರಿನಲ್ಲಿ ಮುಳುಗುತ್ತಿದ್ದ ಹಡಗಿನಲ್ಲಿ ಸಿಲುಕಿದ್ದ 24 ಮೀನುಗಾರರನ್ನು ಜಪಾನ್‌ನ ಕರಾವಳಿ ಕಾವಲು ಪಡೆಯು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿದೆ.

          ಈ ರಕ್ಷಣಾಕಾರ್ಯದಲ್ಲಿ ಹಡಗಿನ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

               ಜಪಾನ್‌ನ ಯೈಝು ಬಂದರು ಪ್ರದೇಶದಿಂದ ಫುಕುಯಿ ಮಾರು-8 ಹೆಸರಿನ ಹಡಗು ಮೀನುಗಾರರನ್ನು ಹೊತ್ತು ದಕ್ಷಿಣ ಅಮೆರಿಕಕ್ಕೆ ತೆರಳುತ್ತಿತ್ತು. ಈ ವೇಳೆ ಹಡಗಿನ ಎಂಜಿನ್‌ನಲ್ಲಿ ದೋಷ ಕಂಡುಬಂದಿತ್ತು. ಇದರಿಂದಾಗಿ ಪೆಸಿಫಿಕ್‌ ಸಾಗರದಲ್ಲಿ ಬೀಸಿದ ಬೃಹತ್ ಗಾಳಿಯಿಂದಾಗಿ ಹಡಗು ದಾರಿ ತಪ್ಪಿತ್ತು. ಈ ಕುರಿತು ಕರಾವಳಿ ಕಾವಲು ಪಡೆಗೆ ಹಡಗಿನ ಕ್ಯಾಪ್ಟನ್ ಮಾಹಿತಿ ನೀಡಿದ್ದರು. ಹೀಗಾಗಿ ಮೀನುಗಾರರ ರಕ್ಷಣೆಗಾಗಿ ಮೂರು ಗಸ್ತು ಹಡಗುಗಳು, ವಿಶೇಷ ರಕ್ಷಣಾ ತಂಡಗಳನ್ನು ಒಳಗೊಂಡ ಮೂರು ಹೆಲಿಕಾಪ್ಟರ್‌ಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿತ್ತು. ಆದರೆ, ಈ ತಂಡ ಬರುವ ಮುನ್ನವೇ ಹಡಗಿನ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಗೊತ್ತಾಗಿದೆ.

ಈ ಹಡಗಿನಲ್ಲಿ ಇಂಡೊನೇಷ್ಯಾದ 20 ಸಿಬ್ಬಂದಿ, ಕರಾವಳಿ ಕಾವಲು ಪಡೆಯ ಸಿಬ್ಬಂದಿ, ಹಾಗೂ ಕ್ಯಾಪ್ಟನ್ ಸೇರಿದಂತೆ ಜಪಾನ್‌ನ ಐವರು ಪ್ರಜೆಗಳು ಇದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries