HEALTH TIPS

ಬಂಧಿತ 35 ಸೊಮಾಲಿಯಾ ಕಡಲ್ಗಳ್ಳರನ್ನು ವಿಚಾರಣೆಗಾಗಿ ಭಾರತಕ್ಕೆ ಕರೆತಂದ ನೌಕಾಪಡೆ

             ನವದೆಹಲಿ: ಸಮುದ್ರ ಪ್ರದೇಶದಲ್ಲಿ ಸರಕು ಸಾಗಾಣಿಕಾ ಹಡಗೊಂದರ ಮೇಲೆ ದಾಳಿ ಮಾಡಿ ಅದರಲ್ಲಿನ 17 ಮಂದಿ ಸಿಬ್ಬಂದಿಗಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡು ಬಳಿಕ ಭಾರತೀಯ ಸೇನೆಯ ಕಾರ್ಯಾಚರಣೆ ವೇಳೆ ಬಂಧಿತರಾಗಿದ್ದ ಸೊಮಾಲಿಯಾದ 35 ಕಡಲ್ಗಳ್ಳರನ್ನು ಭಾರತೀಯ ಸೇನೆ ಸೋಮವಾರ ಭಾರತಕ್ಕೆ ಕರೆತಂದಿದೆ.

             ಈ ಹಿಂದೆ ಸಮುದ್ರ ಪ್ರದೇಶದಲ್ಲಿ ಸರಕು ಸಾಗಾಣಿಕಾ ಹಡಗೊಂದರ ಮೇಲೆ ದಾಳಿ ಮಾಡಿ ಅದರಲ್ಲಿನ 17 ಮಂದಿ ಸಿಬ್ಬಂದಿಗಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ಸೊಮಾಲಿಯಾ ಕಡಲ್ಗಳ್ಳರ ವಿರುದ್ಧ ಸತತ 40 ಗಂಟೆಗಳ ಕಾಲ ಹೋರಾಡಿ 35 ಮಂದಿ ಕಡಲ್ಗಳ್ಳರನ್ನು ಭಾರತೀಯ ನೌಕಾಪಡೆ ಬಂಧಿಸಿತ್ತು.


             ಭಾರತದ ಕರಾವಳಿ ಪ್ರದೇಶದಲ್ಲಿ ಕಡಲ್ಗಳ್ಳರು ನೌಕೆಯೊಂದನ್ನು ಹೈಜಾಕ್‌ ಮಾಡಿ, ತಮ್ಮ ರುಯೆನ್‌ ಹಡಗಿನಲ್ಲಿ 17 ಸಿಬ್ಬಂದಿಯನ್ನು ಬಂಧಿಸಿಟ್ಟಿದ್ದರು. ಈ ಬಗ್ಗೆ ಮಾಹಿತಿ ತಿಳಿಯುತ್ತಲೇ ಕಾರ್ಯಾಚರಣೆ ನಡೆಸಿದ ಭಾರತೀಯ ನೌಕಾಪಡೆ ಸತತ 40 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಎಲ್ಲ 35 ಮಂದಿ ಕಡಲ್ಗಳ್ಳರು ಶರಣಾಗುವಂತೆ ಮಾಡಿದ್ದು ಮಾತ್ರವಲ್ಲದೇ ಎಲ್ಲ 17 ಮಂದಿ ಸಿಬ್ಬಂದಿಗಳನ್ನೂ ರಕ್ಷಣೆ ಮಾಡಿತ್ತು.

            ಇದೀಗ ಬಂಧಿತ ಎಲ್ಲ 35 ಮಂದಿ ಕಡಲ್ಗಳ್ಳರನ್ನು ಸೇನೆ ವಿಚಾರಣೆಗಾಗಿ ಭಾರತಕ್ಕೆ ಕರೆತಂದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, "ಇಂತಹ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಲು ಕಳೆದ ವರ್ಷ ಸೂಚಿಸಲಾದ ಕಡಲ್ಗಳ್ಳತನ ವಿರೋಧಿ ಕಾಯಿದೆ ಈಗಾಗಲೇ ಜಾರಿಯಾಗಿದೆ. ಬಂಧಿತ ಕಡಲ್ಗಳ್ಳರು ಇತರ ಹಡಗುಗಳಿಗೆ ಅಪಾಯವನ್ನುಂಟುಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅವರನ್ನು ನಿಶ್ಯಸ್ತ್ರಗೊಳಿಸಲಾಗುತ್ತದೆ.

               ಆದರೆ ಈ 35 ಕಡಲ್ಗಳ್ಳರು ನಮ್ಮ ಯುದ್ಧನೌಕೆಯ ಮೇಲೆ ಗುಂಡು ಹಾರಿಸಿದರು. ಅವರನ್ನು ಬಿಟ್ಟುಕೊಟ್ಟರೆ, ಅವರು ಮತ್ತೆ ಗುಂಪುಗಳಾಗಿ ಮತ್ತೆ ತಮ್ಮ ಕಡಲ್ಗಳ್ಳತನ ದಾಳಿಯನ್ನು ಪ್ರಾರಂಭಿಸುತ್ತಾರೆ. ಹೀಗಾಗಿ ಅವರನ್ನು ವಿಚಾರಣೆಗಾಗಿ ಭಾರತಕ್ಕೆ ಕರೆತರಲಾಗಿದೆ ಎಂದು ಹೇಳಿದರು.

ಐಎನ್ಎಸ್ ಕೋಲ್ಕತಾ ಮೂಲಕ ಕಾರ್ಯಾಚರಣೆ

           ಇದರ ಕುರಿತು ನಿಖರ ಮಾಹಿತಿ ಪಡೆದ ಭಾರತೀಯ ನೌಕಾಪಡೆಯು, ಐಎನ್‌ಎಸ್‌ ಕೋಲ್ಕೊತಾ ನೌಕೆಯ ಮೂಲಕ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಐಎನ್‌ಎಸ್‌ ಸುಭದ್ರ ನೌಕೆಯೂ ಐಎನ್‌ಎಸ್‌ ಕೋಲ್ಕೊತಾಗೆ ರಕ್ಷಣೆಯಲ್ಲಿ ನೆರವು ನೀಡಿದೆ. ಆ ಮೂಲಕ ಎಲ್ಲ 17 ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿತ್ತು ಎಂದು ನೌಕಾಪಡೆ ಮಾಹಿತಿ ನೀಡಿದೆ.

             ನೌಕಾಪಡೆ ಮೂಲಗಳ ಪ್ರಕಾರ, ''ಅತ್ಯಾಧುನಿಕ ಡ್ರೋನ್‌ಗಳು, ಪಿ 81 ವಿಮಾನ ಹಾಗೂ ಸಿ 17 ವಿಮಾನಗಳನ್ನೂ ಕೂಡ ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು. ಸಿ 17 ಯುದ್ಧವಿಮಾನದ ಮೂಲಕ ನೌಕೆಯ ಸಿಬ್ಬಂದಿಯನ್ನು ಏರ್‌ಲಿಫ್ಟ್‌ ಮಾಡಲಾಗಿದೆ. ಕಡಲ್ಗಳ್ಳರ ಬಳಿ ಭಾರಿ ಪ್ರಮಾಣದ ಅಕ್ರಮ ಶಸ್ತ್ರಾಸ್ತ್ರಗಳು, ಮದ್ದು ಗುಂಡುಗಳು ಹಾಗೂ ಮಾದಕವಸ್ತುವನ್ನು ಕೂಡ ನೌಕಾಪಡೆ ಅಧಿಕಾರಿಗಳು ಜಪ್ತಿ ಮಾಡಿದ್ದು, ಇವರು ಸೋಮಾಲಿಯಾದ ಕಡಲ್ಗಳ್ಳರು ಎಂದು ನೌಕಾಪಡೆ ಮಾಹಿತಿ ನೀಡಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries