ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್ ಮತ್ತು ಚೆಮ್ನಾಡು ಗ್ರಾಮ ಪಂಚಾಯಿತಿಯ ಸಿಡಿಎಸ್‍ಗೆ ಮಂಜೂರಾದ ನೇಚರ್ಸ್ ಫ್ರೆಶ್ ಅಗ್ರಿ ಕಿಯೋಸ್ಕ್ ಚೆಮ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಫೈಜಾ ಅಬೂಬಕ್ಕರ್ ಉದ್ಘಾಟಿಸಿದರು.
ನೇಚರ್ಸ್ ಫ್ರೆಶ್ ಅಗ್ರಿ ಕಿಯೋಸ್ಕ್ ಜನರಿಗೆ ಫಾರ್ಮ್ ಫ್ರೆಶ್ ತರಕಾರಿಗಳು, ಹಣ್ಣುಹಂಪಲುಗಳು ಮತ್ತು ಕುಟುಂಬಶ್ರೀ ಉದ್ಯಮಿಗಳ ಉತ್ಪನ್ನಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದು ಜಿಲ್ಲೆಯ ಮೊದಲ ಫಾರ್ಮ್ ಫ್ರೆಶ್ ಯೂನಿಟ್ ಆಗಿದ್ದು, ನೇಚರ್ಸ್ ಫ್ರೆಶ್ ಅಗ್ರಿ ಕಿಯೋಸ್ಕ್ ಬೆಂಡಿಚಾಲ್ ಚಿಲ್ಡ್ರನ್ಸ್ ಪಾರ್ಕ್ ಬಳಿ ಕಾರ್ಯಾಚರಣೆ ಆರಂಭಿಸಿದೆ.
ಚೆಮ್ನಾಡ್ ಗ್ರಾಮ ಪಂಚಾಯಿತಿ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಶಂಶುದ್ದೀನ್ ತೆಕ್ಕಿಲ್ ಅಧ್ಯಕ್ಷತೆ ವಹಿಸಿದ್ದರು. ಸಿಡಿಎಸ್ ಅಧ್ಯಕ್ಷೆ ಮುಮ್ತಾಜ್ ಅಬೂಬಕ್ಕರ್, ಪಂಚಾಯತ್ ಆಡಳಿತ ಸಮಿತಿ ಸದಸ್ಯ ಅಮೀರ್ ಪಾಲೋತ್, ಪಂಚಾಯತ್ ಯೋಜನಾ ಮಂಡಳಿ ಉಪಾಧ್ಯಕ್ಷ ಕೆ.ವಿಜಯನ್, ಸಿಡಿಎಸ್ ಮತ್ತು ಎಡಿಎಸ್ ಸದಸ್ಯರು ಉಪಸ್ಥಿತರಿದ್ದರು.


