ಕಾಸರಗೋಡು : ಮುಂಬರುವ ಲೋಕಸಭೆ ಚುನಾವಣೆ ನಿಟ್ಟಿನಲ್ಲಿ ನಗರದ ತಾಳಿಪಡ್ಪಿನಲ್ಲಿ ಆರಂಭಿಸಲಾದ ಎನ್‍ಡಿಎ ಕಾಸರಗೋಡು ಲೋಕಸಭಾ ಕ್ಷೇತ್ರ ಚುನಾವಣಾ ಸಮಿತಿ ಕಚೇರಿಯನ್ನು ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಉದ್ಘಾಟಿಸಿದರು.
ಕಾಸರಗೋಡಿನ ತಾಳಿಪಡ್ಪು ಗೋಲ್ಡನ್ ಟವರ್ ಕಟ್ಟಡದಲ್ಲಿ ನೂತನ ಕಚೇರಿ ಆರಂಭಿಸಲಾಗಿದೆ. ಎನ್‍ಡಿಎ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿಗಳಾದ ಕೆ. ರಂಜಿತ್, ವಕೀಲ ಕೆ. ಶ್ರೀಕಾಂತ್, ರಾಷ್ಟ್ರೀಯ ಪರಿಷತ್ತಿನ ಸದಸ್ಯರಾದ ಪ್ರಮೀಳಾ. ಸಿ. ನಾಯ್ಕ್, ಎಂ.ಸಂಜೀವ ಶೆಟ್ಟಿ, ರಾಜ್ಯ ಸಮಿತಿ ಸದಸ್ಯರಾದ ಕೆ. ಮನೋಜ್ ಕುಮಾರ್, ವಕೀಲ ವಿ. ಬಾಲಕೃಷ್ಣ ಶೆಟ್ಟಿ, ವಕೀಲ ಕೆ. ಕೆ. ಶ್ರೀಧರನ್, ಬಿಜೆಪಿ ಉತ್ತರ ವಲಯ ಕಾರ್ಯದರ್ಶಿ ಪಿ. ಸುರೇಶ್ ಕುಮಾರ್ ಶೆಟ್ಟಿ,
ಆರ್‍ಎಲ್‍ಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣನ್ ವಾಳುನ್ನೋರಡಿ ಉಪಸ್ಥಿತರಿದ್ದರು. ಎನ್‍ಡಿಎ ಸಂಚಾಲಕ ಗಣೇಶ್ ಪಾರೆಕಟ್ಟ ಸ್ವಾಗತಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ವೇಲಾಯುಧನ್ ವಂದಿಸಿದರು.

