ಕಾಸರಗೋಡು: ಸಾಂತ್ವನ ಪರಿಪಾಲನೆ ರಂಗದ ಹಿರಿಯ ನಾಗರಿಕರ ಪರಿಪಾಲನೆ, ರೋಗಿಗಳ ಪರಿಪಾಲನೆ, ಬೇಬಿ ಸಿಟ್ಟಿಂಗ್ ಪಾಲಿಯೇಟಿವ್ ಕೇರ್ ಎಂಬೀ ವಲಯಗಳಲ್ಲಿ ಸೇವೆ ಸಲ್ಲಿಸಲು ಕುಟುಂಬಶ್ರೀ ಆರಂಭಿಸಿದ ಯೋಜನೆಯಾಗಿದೆ ಕೆ ಪೋರ್ ಕೇರ್. ಇದು ಮಾದರಿಯಾಗಿ ಕಾರ್ಯನಿರ್ವಹಿಸಲಿದೆ. 2018 ರಲ್ಲಿ ಹರ್ಷಂ ಎಂಬ ಹೆಸಿರನಲ್ಲಿ ಜೆರಿಯಾಟ್ರಿಕ್ ಕೇರ್ ಎಕ್ಸಿಕ್ಯೂಟೀವ್‍ಗಳಿಗೆ ತರಬೇತಿ ನೀಡಿ ಉದ್ಯೋಗ ಕಲ್ಪಿಸುವ ಯೋಜನೆಯನ್ನು ಆರಂಭಿಸಿತ್ತು. ಅದರ ಎರಡನೇ ಹಂತದಲ್ಲಿ ಕೆ ಫೆÇೀರ್ ಕೇರ್ ಯೋಜನೆಯನ್ನು ಕುಟುಂಬಶ್ರೀ ಆರಂಭಿಸಿದೆ.
ಯೋಜನೆಯನ್ನು ಕುಂಬಳೆಯ ಡಾಕ್ಟರ್ಸ್ ಹಾಸ್ಪಿಟಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬಶ್ರೀ ಎಕ್ಸಿಕ್ಯೂಟೀವ್ ಡೈರೆಕ್ಟರ್ ಜಾಫರ್ ಮಾಲಿಕ್ ಉದ್ಘಾಟಿಸಿದರು. ಜಿಲ್ಲೆಯಲ್ಲಿ 3 ಬ್ಯಾಚ್‍ಗಳಲ್ಲಾಗಿ 90 ಮಂದಿಗೆ ತರಬೇತಿ ನೀಡಲಾಗುವುದು. ಜಿಲ್ಲಾ ಮಿಷನ್ ಕೋರ್ಡಿನೇಟರ್ ಟಿ.ಟಿ.ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಅಸಿಸ್ಟೆಂಟ್ ಜಿಲ್ಲಾ ಕೋರ್ಡಿನೇಟರ್ ಪಿ.ಹರಿದಾಸ್, ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ಟಿ.ಪಿ.ಆತಿರ, ಲರ್ನಿಂಗ್ ಅಕಾಡೆಮಿ ಆಡಳಿತ ನಿರ್ದೇಶಕ ಮುಹಮ್ಮದ್ ಶರೀಫ್ ಉಪಸ್ಥಿತರಿದ್ದರು.


