ತಿರುವನಂತಪುರಂ: ಕೇರಳ ಸ್ಪೋಟ್ರ್ಸ್ ಕೌನ್ಸಿಲ್ ಮಾಜಿ ಅಧ್ಯಕ್ಷೆ ಪದ್ಮಿನಿ ಥಾಮಸ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕೇರಳದ ಪ್ರಮುಖ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಏಷ್ಯನ್ ಗೇಮ್ಸ್ ಪದಕ ವಿಜೇತೆ ಪದ್ಮಿನಿ ಥಾಮಸ್ ಅವರು ಕಾಂಗ್ರೆಸ್ ಜೊತೆಗಿನ ಸುದೀರ್ಘ ಒಡನಾಟವನ್ನು ಕೊನೆಗೊಳಿಸಿ ಬಿಜೆಪಿ ಸೇರಿದ್ದಾರೆ. ತಿರುವನಂತಪುರದ ಕೆಲವು ಪ್ರಮುಖರು ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಈ ಹಿಂದೆ ಹೇಳಿಕೆ ನೀಡಿದ್ದರು.
1982 ರ ಏಷ್ಯನ್ ಕ್ರೀಡಾಕೂಟದಲ್ಲಿ ಅವರು 400 ಮೀಟರ್ ಓಟದಲ್ಲಿ ಕಂಚು ಮತ್ತು 4,400 ಮೀಟರ್ ರಿಲೇಯಲ್ಲಿ ಬೆಳ್ಳಿ ಗೆದ್ದಿದ್ದರು.


