HEALTH TIPS

ಕಯ್ಯಾರ್ ಕ್ರಿಸ್ತರಾಜ ದೇವಾಲಯದಲ್ಲಿ ಗರಿಗಳ ಭಾನುವಾರ ಆಚರಣೆ

                  ಕುಂಬಳೆ: ಕ್ರೈಸ್ತ ಬಾಂಧವರು ಪವಿತ್ರ ವಾರ ಎಂದು  ಕರೆಯಲ್ಪಡುವ ಪವಿತ್ರ ಸಪ್ತಾಹ ಗರಿಗಳ ಭಾನುವಾರ ಆಚರಣೆ ಆರಂಭಗೊಂಡಿತು.

                ಕಯ್ಯಾರ್   ಕ್ರಿಸ್ತರಾಜ ದೇವಾಲಯದಲ್ಲಿ  ನಡೆದ  ಆಶೀರ್ವಚನ ಮತ್ತು ದಿವ್ಯ ಬಲಿಪೂಜೆಯನ್ನು ಧರ್ಮಗುರು ಫಾದರ್ ವಿಶಾಲ್ ಮೊನಿಸ್ ನೆರೆವೇರಿಸಿದರು. 

                 ಪಾಮ್ ಸಂಡೆ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ಆರಂಭಗೊಳ್ಳುತ್ತದೆ. ಯೇಸು ಕ್ರಿಸ್ತರು ಜೆರುಸಲೇಂ ನಗರ ಪ್ರವೇಶಿಸಿದಾಗ ಅಲ್ಲಿನ ಭಕ್ತರು ಒಲಿವ್ ಮರದ ಗರಿಗಳನ್ನು ಹಿಡಿದು ವೈಭವದಿಂದ ಸ್ವಾಗತಿಸಿದ ಸಂಕೇತವಾಗಿ ತೆಂಗಿನ ಗರಿಗಳನ್ನು ಹಿಡಿದು ಕ್ರೈಸ್ತರು ಬಲಿಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 

                  ಪವಿತ್ರ ಸಪ್ತಾಹವು ಕ್ರೈಸ್ತರಿಗೆ ಅತಿ ಮಹತ್ವದ್ದಾಗಿದ್ದು, ಗುರುವಾರ ಯೇಸು ಕ್ರಿಸ್ತರ ಕೊನೆಯ ಭೋಜನದ ಸ್ಮರಣೆ ಮಾಡಿದರೆ, ಶುಕ್ರವಾರ ಯೇಸುಕ್ರಿಸ್ತರ ಮರಣದ ದಿನವಾದ 'ಗುಡ್ ಫ್ರೈಡೆ' ಆಚರಣೆ ಮಾಡಿ ಕ್ರೈಸ್ತರು ಇಡೀ ದಿನವನ್ನು ಉಪವಾಸ ಧ್ಯಾನದಲ್ಲಿ ಕಳೆಯುತ್ತಾರೆ. ಶನಿವಾರ ಈಸ್ಟರ್ ಜಾಗರಣೆ ಮತ್ತು ಭಾನುವಾರ ಯೇಸು ಕ್ರಿಸ್ತರ ಪುನರುತ್ಥಾನದ ಪ್ರಯುಕ್ತ ಈಸ್ಟರ್ ಹಬ್ಬದ ಆಚರಣೆ ನಡೆಯುತ್ತದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries