ಕಾಸರಗೋಡು: ಇವಿಎಂ ಕಾರ್ಯಾರಂಭಕ್ಕೆ ನಿಯೋಜಿಸಲಾದ ಸೆಕ್ಟೋರಲ್ ಅಧಿಕಾರಿಗಳು ಮತ್ತು ಸಿಬ್ಬಂಧಿಗಳಿಗೆ ಕ್ಷೇತ್ರವಾರು ತರಬೇತಿ ನೀಡಲಾಯಿತು. ಮಂಜೇಶ್ವರ ಕ್ಷೇತ್ರದಲ್ಲಿ ನಿಯೋಜಿತ ಅಧಿಕಾರಿಗಳಿಗೆ ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಕಾಸರಗೋಡು ಕ್ಷೇತ್ರದಲ್ಲಿ ನಿಯೋಜನೆಗೊಂಡ ಅಧಿಕಾರಿಗಳಿಗೆ ಕಾಸರಗೋಡು ಬ್ಲಾಕ್ ಪಂಚಾಯತಿ ಸಭಾಂಗಣ, ಉದುಮ ಕ್ಷೇತ್ರದಲ್ಲಿ ನಿಯೋಜನೆಗೊಂಡ ಅಧಿಕಾರಿಗಳಿಗೆ ಕಾಸರಗೋಡಿನ ಜಿಲ್ಲಾ ಮಾಹಿತಿ ಕಛೇರಿ ಪಿಆರ್ ಚೇಂಬರ್, ಕಾಞಂಗಾಡ್ ಕ್ಷೇತ್ರದ ಮಿನಿ ಸಿವಿಲ್ ಸ್ಟೇಷನ್ ತ್ರಿಕರಿಪುರ ಕ್ಷೇತ್ರದಲ್ಲಿ ನೇಮಕಗೊಂಡ ಅಧಿಕಾರಿಗಳಿಗೆ ಪಂಚಾಯತಿ ಸಭಾಂಗಣದಲ್ಲಿ ತರಬೇತಿ ನೀಡಲಾಯಿತು.
ರಾಜ್ಯ ಮತ್ತು ಜಿಲ್ಲಾ ಮಟ್ಟದ ಮಾಸ್ಟರ್ ತರಬೇತುದಾರರು ತರಬೇತಿ ನೀಡಿದರು. ಸಹಾಯಕ ಚುನಾವಣಾಧಿಕಾರಿಗಳು, ಸಿಬ್ಬಂದಿಗಳು, ಸೆಕ್ಟೋರಲ್ ಅಧಿಕಾರಿಗಳು ಮತ್ತು ಇವಿಎಂ ಕಾರ್ಯಾರಂಭಕ್ಕೆ ನಿಯೋಜಿಸಲಾದ ಅಧಿಕಾರಿಗಳು ಉಪಸ್ಥಿತರಿದ್ದರು.


