ಕಾಸರಗೋಡು: ರಾಮಕ್ಷತ್ರಿಯ ಸಮಾಜದ ಸಾಹಿತಿ, ಅಸೋಸಿಯೇಟೆಡ್ ಪ್ರಾಧ್ಯಾಪಕಿ ಡಾ ಕೆ ಎನ್ ಶೈಲಾ ತೊಕ್ಕೊಟ್ಟು, ಮಂಗಳೂರು ಇವರೀಗೆ ಕಾಸರಗೋಡು ಕನ್ನಡ ಭವನದಲ್ಲಿ ನಡೆದ ಕೇರಳ -ಕರ್ನಾಟಕ ಕನ್ನಡ ಸಂಸ್ಕøತಿ ಸಮ್ಮೇಳನ ದಲ್ಲಿ ಮಂಗಳೂರಿನ ಕಥಾಬಿಂಧು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯ ಪ್ರತಿಷ್ಠಿತ ಕಥಾಬಿಂಧು ಕನ್ನಡ ರತ್ನ ರಾಜ್ಯ ಪ್ರಶಸ್ತಿ ನೀಡಿ ಇತ್ತೀಚೆಗೆ ಗೌರವಿಸಿತು.
ಸಾಹಿತಿ ಪಿ ವಿ ಪ್ರದೀಪ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು ಸಭಾಧ್ಯಕ್ಷ ಸಾಹಿತಿ ರಾಧಾಕೃಷ್ಣ ಕೆ ಉಳಿಯತಡ್ಕ, ಕನ್ನಡ ಭವನ ಅಧ್ಯಕ್ಷ ವಾಮನ್ ರಾವ್ ಬೇಕಲ್, ವಿಶ್ವ ರಾಮಕ್ಷತ್ರಿಯ ಮಹಾಸಂಘ ಸಂಘಟನಾ ಕಾರ್ಯದರ್ಶಿ ಸಂದ್ಯಾ ರಾಣಿ ಟೀಚರ್, ಡಾ ಗೋವಿಂದ ಭಟ್, ಪೆÇ್ರ ಎ ಶ್ರೀನಾಥ್, ಸಾಹಿತಿ ಸತ್ಯವತಿ ಭಟ್ ಕೊಲಚಪ್ಪು, ಹಿರಿಯ ಶಿಕ್ಷಣ ತಜ್ಞ, ಸಾಹಿತಿ ವಿ ಬಿ ಕುಳಮರ್ವ ಮುಂತಾದವರಿದ್ದರು.


