HEALTH TIPS

ಪ್ರಸಾರ ಭಾರತಿ: ಸುದ್ದಿ ಹಂಚಿಕೆ ಸೇವೆಗೆ ಚಾಲನೆ

          ವದೆಹಲಿ: ಸುದ್ದಿ ಸಂಸ್ಥೆಗಳಿಗೆ ಸುದ್ದಿ, ಸ್ಪಷ್ಟವಾದ ವಿಡಿಯೊ ಹಾಗೂ ಚಿತ್ರಗಳನ್ನು ಹಂಚಿಕೊಳ್ಳುವ ಪ್ರಸಾರ ಭಾರತಿಯ ಪಿಬಿ- ಶಬ್ದ್‌ ಯೋಜನೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಅವರು ಬುಧವಾರ ಚಾಲನೆ ನೀಡಿದರು.

              ಪಿವಿ- ಶಬ್ದ್‌ (ಪ್ರಸಾರ ಭಾರತಿ- ಶೇರ್‌ಡ್‌ ಆಡಿಯೊ ವಿಜ್ಯವಲ್ಸ್‌ ಫಾರ್‌ ಬ್ರಾಡ್‌ಕಾಸ್ಟ್‌ ಅಯಂಡ್‌ ಡಿಸ್‌ಎಮಿನೇಷನ್‌) ಯೋಜನೆಯಡಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದೊಂದಿಗೆ ನೋಂದಣಿ ಮಾಡಿಕೊಂಡ ಸುದ್ದಿ ಸಂಸ್ಥೆಗಳಿಗೆ ಒಂದು ವರ್ಷದವರೆಗೆ ಉಚಿತ ಸೇವೆಯನ್ನು ಒದಗಿಸಲಾಗುವುದು.‌

'ಸುಮಾರು 50 ವಿಭಾಗಗಳಲ್ಲಿ ಭಾರತದ ಎಲ್ಲ ಪ್ರಮುಖ ಭಾಷೆಗಳಲ್ಲಿ ಸುದ್ದಿಗಳನ್ನು ಸುದ್ದಿಸಂಸ್ಥೆಗಳಿಗೆ ಒದಗಿಸಲಾಗುವುದು. 'ಪಿಬಿ- ಶಬ್ದ್‌' ಮೂಲಕ ಒದಗಿಸುವ ಯಾವುದೇ ವಿಡಿಯೊಗಳಿಗೆ ದೂರದರ್ಶನದ ಲಾಂಛನ ಬಳಸುವ ಅಗತ್ಯವಿಲ್ಲ' ಎಂದರು.‌

                 ಇದೇ ಸಂದರ್ಭ, ಅನುರಾಗ್‌ ಅವರು ಡಿಡಿ ನ್ಯೂಸ್‌ ಮತ್ತು ಆಕಾಶವಾಣಿ ನ್ಯೂಸ್‌ನ ನವೀಕೃತ ವೆಬ್‌ಸೈಟ್‌ಗಳಿಗೆ ಚಾಲನೆ ನೀಡಿ, ನ್ಯೂಸ್‌ಆನ್‌ಏರ್‌ಮೊಬೈಲ್‌ ಆಯಪ್‌ನ ನೂತನ ವಿನ್ಯಾಸವನ್ನು ಅನಾವರಣಗೊಳಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries