HEALTH TIPS

ಬದಿಯಡ್ಕದಲ್ಲಿ ಕೊಂಡೆವೂರು ಅಷ್ಟೋತ್ತರ ಸಹಸ್ರ ನವಗ್ರಹ ಯಾಗ ಸಮಿತಿ ರೂಪೀಕರಣ ಸಭೆ:ವೇದಕಾಲದಲ್ಲಿ ಯಜ್ಞಗಳಿಂದ ಪ್ರಕೃತಿಯ ಸಮತೋಲನ - ಕೊಂಡೆವೂರು ಶ್ರೀ:

              ಬದಿಯಡ್ಕ: ಶ್ರೀ ನಿತ್ಯಾನಂದ ಯೋಗಾಶ್ರಮ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಕೊಂಡೆವೂರು ಮಠದಲ್ಲಿ ಲೋಕಲ್ಯಾಣಾರ್ಥವಾಗಿ ಮಾರ್ಚ್ 24 ಭಾನುವಾರದಂದು ನಡೆಯಲಿರುವ ನವಗ್ರಹ ಪ್ರತಿಷ್ಠೆ ಹಾಗೂ ಅಷ್ಟೋತ್ತರ ಸಹಸ್ರ ನವಗ್ರಹ ಯಾಗದ ಬದಿಯಡ್ಕ ಘಟಕ ರೂಪೀಕರಣ ಸಭೆ ಶುಕ್ರವಾರ ಕೆಡೆಂಜಿ ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಜರಗಿತು.

              ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯವನ್ನು ವಹಿಸಿ ಆಶೀರ್ವಚನವನ ನುಡಿಗಳೊಂದಿಗೆ ಯಾಗದ ಮಹತ್ವವನ್ನು ವಿವರಿಸಿದರು. ಯಾಗದಲ್ಲಿ ಯಾವರೀತಿ ತೊಡಗಿಸಿಕೊಳ್ಳಬಹುದೆಂಬುದನ್ನು ತಿಳಿಸಿದ ಅವರು, ವೇದಕಾಲದಲ್ಲಿ ಋಷಿಮುನಿಗಳು ಯಜ್ಞಗಳನ್ನು ನಡೆಸುತ್ತಾ ಪ್ರಕೃತಿಯ ಸಮತೋಲನವನ್ನು ಕಾಪಾಡಿಕೊಂಡಿದ್ದರು. ದೇವತಾ ಸಾನ್ನಿಧ್ಯಗಳು ಪರಿಸರಕ್ಕೆ ಶಕ್ತಿಯನ್ನು ನೀಡುತ್ತದೆ. ಹಿಂದೂ ಸಮಾಜದ ಸಂಕಟಗಳು ನಿವಾರಣೆಯಾಗಿ ಉತ್ತಮ ದಿನಗಳು ನಮ್ಮದಾಗಬೇಕಿದೆ. ಶ್ರೀಮಠದಲ್ಲಿ 48 ವೃಕ್ಷಗಳ ವನವಿದೆ. ಗ್ರಹದೋಷ ನಿವಾರಣೆಗೆ ನವಗ್ರಹಗಳ ಪ್ರತಿಷ್ಠೆ ನಡೆಯುತ್ತದೆ. ಗ್ರಹಗತಿಗಳ ಸಂಬಂಧ ಲಭಿಸುವ ದೋಷಗಳ ನಿವಾರಣೆಯಾಗಿ ಉತ್ತಮ ಫಲ ಪ್ರಾಪ್ತಿಯಾಗಲು ಗ್ರಹಗಳ ಅನುಗ್ರಹಬೇಕಿದೆ. ಬಡವ ಶ್ರೀಮಂತರೆನ್ನು ಭೇದವಿಲ್ಲದೆ ಎಲ್ಲರಿಗೂ ಶ್ರೀಮಠದಲ್ಲಿ ಅವಕಾಶವನ್ನು ಕಾದಿವೆ ಎಂದರು.

           ಕೋಶಾಧ್ಯಕ್ಷ ಮಧುಸೂದನ ಆಯರ್ ಮಂಗಳೂರು ಸನಾತನ ಹಿಂದೂ ಧರ್ಮದ ಉಳಿವಿಗೆ ಶ್ರೀಮಠವು ಹಮ್ಮಿಕೊಂಡ ಯೋಜನೆಗಳ ಕುರಿತು ಮಾತನಾಡಿದರು. ಇದೇ ಸಂದರ್ಭ ಬದಿಯಡ್ಕ ಘಟಕ ರೂಪೀಕರಣ ನಡೆಯಿತು. ಅಧ್ಯಕ್ಷರಾಗಿ ಹರೀಶ್ ಸ್ಕಂದ, ಉಪಾಧ್ಯಕ್ಷರಾಗಿ ಅವಿನಾಶ್ ರೈ, ವಕೀಲ ಗಣೇಶ್ ಬಿ., ಪ್ರಧಾನ ಕಾರ್ಯದರ್ಶಿಯಾಗಿ ನರೇಂದ್ರ ಬಿ.ಎನ್., ಕಾರ್ಯದರ್ಶಿಯಾಗಿ ಬಾಲಕೃಷ್ಣ ಶೆಟ್ಟಿ ಕಡಾರು, ಡಿ. ಉದನೇಶ್ವರ ಬಿ., ಮಂಜುನಾಥ ಮಾನ್ಯ, ಕೋಶಾಧಿಕಾರಿಯಾಗಿ ರಾಜೇಶ್ ಬದಿಯಡ್ಕ ಅವರನ್ನು ಆರಿಸಲಾಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries