HEALTH TIPS

ಮಜಿಬೈಲು ಶಾಲೆಯಲ್ಲಿ ಸಂಭ್ರಮದ ಕಲಿಕೋತ್ಸವ

         ಮಂಜೇಶ್ವರ: ಮಜಿಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ  ಕಲಿಕೋತ್ಸವ 2023-24 ಕಾರ್ಯಕ್ರಮವು ಜರುಗಿತು. ಸರ್ಕಾರದ ಆದೇಶದಂತೆ ಮಕ್ಕಳ ಶೈಕ್ಷಣಿಕ ಪ್ರಗತಿಗಳನ್ನು ಹೆತ್ತವರಿಗೆ ಮತ್ತು  ಸಾರ್ವಜನಿಕರಿಗೆ  ತಿಳಿಸುವ ನಿಟ್ಟಿನಲ್ಲಿ  ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

            ಮಜಿಬೈಲು ವಾರ್ಡ್ ಸದಸ್ಯೆ ಆಶಾಲತ ಬಿ.ಎಂ ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲಾ ನಿರ್ವಾಹಕ ಸಮಿತಿ ಅಧ್ಯಕ್ಷೆ ವಿನಯ, ಮಾತೃ ಸಂಘದ ಅಧ್ಯಕ್ಷೆ ಶೋಭಾ  ಉಪಸ್ಥಿತರಿದ್ದರು. ಮಂಜೇಶ್ವರ ಬಿ .ಆರ್ .ಸಿ .ಯ ಬಿ.ಪಿ.ಸಿ ಜೋಯ್ ಮತ್ತು ಸಿ. ಆರ್. ಸಿ ಸಂಯೋಜಕಿ ಮೋಹಿನಿ ಟೀಚರ್ ಶುಭಾಶಂಸನೆಗೈದರು. ಮುಖ್ಯೋಪಾಧ್ಯಾಯ ಸುರೇಶ ಬಂಗೇರ ಸ್ವಾಗತಿಸಿ ಕಲಿಕೋತ್ಸವದ ಪ್ರಸಕ್ತಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳ ಕಲಿಕಾ ಚಟುವಟಿಕೆಗಳ ಪ್ರದರ್ಶನ ನಡೆಯಿತು. ಮಕ್ಕಳು ತಾವು ಪ್ರಸ್ತುತ ಅಧ್ಯಯನ ವರ್ಷ ಆರ್ಜಿಸಿಕೊಂಡಿರುವ ವಿಷಯಗಳನ್ನು ರಸವತ್ತಾಗಿ ಹೆತ್ತವರ ಮುಂದೆ ಪ್ರಸ್ತುತಪಡಿಸಿದರು. ಓದುವ ಚಟುವಟಿಕೆಗಳು, ಬರವಣಿಗೆಗಳು, ಕಿರು ನಾಟಕಗಳು, ನೃತ್ಯ ಇತ್ಯಾದಿ ಕಾರ್ಯಕ್ರಮಗಳು ಹೆತ್ತವರ ಮನರಂಜಿಸಿದುವು. ಶಿಕ್ಷಕಿ ಅಶ್ವಿನಿ ಮತ್ತು ಶಿಕ್ಷಕ ದೇವಾನಂದ ಕಾಡೂರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಕವಿತಾ ಟೀಚರ್ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries