ಕುಂಬಳೆ: ಬೆಳಗಾವಿಯ ಡಾ. ಬೆಟಗೇರಿ ಕೃಷ್ಣ ಶರ್ಮ ಸ್ಮಾರಕ ಟ್ರಸ್ಟ್ ಹಾಗೂ ಶಂಪಾ ಪ್ರತಿಷ್ಠಾನ ಬೆಂಗಳೂರು ವತಿಯಿಂದ 'ಆನಂದ ಕಂದ ಸಾಹಿತ್ಯ ಹಬ್ಬ-ಕಾಸರಗೋಡು'ಮಾ. 16ಮತ್ತು 17ರಂದು ಪೈವಳಿಕೆ ಪಂಚಾಯಿತಿಯ ಕುಡಾಲ್‍ಮೇರ್ಕಳ ನಿಸರ್ಗ ಧಾಮದಲ್ಲಿ ಜರುಗಲಿದೆ.
16ರಂದು ಬೆಳಗ್ಗೆ 10ಕ್ಕೆ ಲಕ್ಷ್ಮೀಶ ತೊಳ್ಪಾಡಿ ಸಮಾರಂಭ ಉದ್ಘಾಟಿಸುವರು. ರಾಘವೇಂದ್ರ ಪಾಟೀಲ ಅಧ್ಯಕ್ಷತೆ ವಹಿಸುವರು. ಎಂ.ಜಿ ಹೆಗಡೆ ಆಶಯ ಭಾಷಣ ಮಾಡುವರು. ಪ್ರಮಿಳಾ ಮಾಧವ್, ಪ್ರ. ಪಿ.ಎನ್ ಮೂಡಿತ್ತಾಯ, ವಿದ್ಯಾವತಿ ಭಜಂತ್ರಿ ಉಪಸ್ಥಿತರಿರುವರು.
ನಂತರ ಕವಿತೆ ವಾಚನ-ಗಾಯನ-ಮನನ ಕಾರ್ಯಕ್ರಮ ನಡೆಯುವುದು. 17ರಂದು ಬೆಳಗ್ಗೆ 9.45ರಿಂದ ವಿವಿಧ ಗೋಷ್ಠಿಗಳು, ಕಥೆ-ವಾಚನ-ಮನನ ನಡೆಯುವುದು. ಮಧ್ಯಾಹ್ನ 2.45ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಸಮಾರೋಪ ಭಾಷಣ ಮಾಡುವರು. ಪ್ರಮಿಳಾ ಮಾಧವ್ ಅಧ್ಯಕ್ಷತೆ ವಹಿಸುವರು.

