ಕಾಸರಗೋಡು: ಪ್ರಸಿದ್ಧ ಚೇವಾರು ಚೆಂಡೆ ಕಂಮ್ತಿಯವರ ಮನೆತನದ ದಿ.ಕೇಶವ ಕಾಮತ್ ಅಮಿತಾ ಕಾಮತ್ ದಂಪತಿ ಪುತ್ರ ಚೇವಾರು ಚಿದಾನಂದ ಕಾಮತ್ ಅವರಿಗೆ ಪಾಂಡಿಚೇರಿಯ ಪ್ರತಿಷ್ಠಿತ ಯುನೈಟೆಡ್ ನೇಶನ್‍ಇಂಟರ್‍ನೇಶನಲ್ ಪೀಸ್ ಕೌನ್ಸಿಲ್ ವಿ ವಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಬೆಂಗಳೂರಿನಲ್ಲಿ ಪ್ರಸಿದ್ಧ ಕಟ್ಟಡ ನಿರ್ಮಾಣಸಂಸ್ಥೆಯಾದ ಜೆ ಎಂ ಸಿ ಸಂಸ್ಥೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜ ಸೇವೆ, ಅಶಕ್ತರಿಗೆ ನೆರವು, ಕಲೆ, ಶಿಕ್ಷಣಕ್ಕೆ ನೆರವಾಗುವುದರ ಜತೆಗೆ ತನ್ನ ಮನೆತನದ ಯಕ್ಷಗಾನದ ಕಲೆಯ ಮೇಲಿನ ಪ್ರೀತಿಯಿಂದ ಯಕ್ಷಗಾನ ವೇಷಧಾರಿಯಾಗಿಯೂ ಮಿಂಚುತ್ತಿದ್ದಾರೆ. ಯಕ್ಷಗಾನ ಕಲೆಗೆ ಮತ್ತುಕಲಾವಿದರಿಗೆ ನೆರವಾಗುವ ನಿಟ್ಟಿನಲ್ಲಿ ಯಕ್ಷಗಾನ ಬಯಲಾಟ ನಡೆಸುತ್ತಿರುವುದಲ್ಲದೆ, ಅಶಕ್ತ ಕಲಾವಿದರಿಗೆ ಆರ್ಥಿಕ ನೆರವು ನೀಡುತ್ತಿದ್ದಾರೆ.


