ಕಾಸರಗೋಡು: ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಐ ಇ ಸಿ ಚಟುವಟಿಕೆಗಳು ಮತ್ತು ಪ್ರಚಾರ ಚಟುವಟಿಕೆಗಳಲ್ಲಿ ಸಹಾಯ ಮಾಡಲು ಐ ಇ ಸಿ ಇಂಟರ್ನ್ ಗಳನ್ನು ನೇಮಿಸಲಾಗುತ್ತದೆ. ಯಾವುದಾದರೂ ವಿಷಯದಲ್ಲಿ ಪಡೆದ ಪದವಿಯ ಜೊತೆಗೆ ಪತ್ರಿಕೋದ್ಯಮ, ಸಾರ್ವಜನಿಕ ಸಂಪರ್ಕ, ಸಮಾಜ ಸೇವೆ(ಸೋಶಿಯಲ್ ವರ್ಕ್)ಯಲ್ಲಿ ಪಡೆದ ಡಿಪೆÇ್ಲಮಾ, ಪದವಿ , ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯಾಗಿರುತ್ತದೆ. ಕಳೆದ ವರ್ಷ ಕೋರ್ಸ್ ಉತ್ತೀರ್ಣರಾದವರನ್ನು ಒಂದು ವರ್ಷದ ಅವಧಿಗೆ ಮಾಸಿಕ ಸ್ಟೈಫಂಡ್‍ನೊಂದಿಗೆ ನೇಮಕ ಮಾಡಲಾಗುತ್ತದೆ. ಅರ್ಜಿಯನ್ನು ಇ-ಮೇಲ್, ಅಂಚೆ ಮೂಲಕ ಅಥವಾ ಖುದ್ದಾಗಿ ಕಛೇರಿಗೆ ಮಾರ್ಚ್ 20ರ ಮೊದಲು ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ ಇಮೇಲ್ : ಣsಛಿಞಚಿsಚಿಡಿಚಿgoಜ@gmಚಿiಟ.ಛಿom ಹಾಗೂ ಮೊಬೈಲ್ ಸಂಖ್ಯೆ(8281121308.)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


