HEALTH TIPS

ಜೆಎನ್‌ಯುನಲ್ಲಿ 'ಬಸ್ತರ್: ದಿ ನಕ್ಸಲೈಟ್ ಸ್ಟೋರಿ' ಚಿತ್ರ ಪೂರ್ವ ಪ್ರದರ್ಶನ

            ವದೆಹಲಿ: ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಘಟಕ ಎಬಿವಿಪಿ ಸಂಘಟನೆಯು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ 'ಬಸ್ತರ್: ದ ನಕ್ಸಲೈಟ್ ಸ್ಟೋರಿ' ಎಂಬ ಚಿತ್ರದ ಪೂರ್ವ ಪ್ರದರ್ಶನ ನಡೆಸಿತು.

              ಈ ಕಾರ್ಯಕ್ರಮದಲ್ಲಿ ಚಿತ್ರ ನಿರ್ದೇಶಕ ಸುದಿಪ್ತೊ ಸೇನ್ ಹಾಗೂ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ನಟಿ ಅದಾ ಶರ್ಮಾ ಭಾಗವಹಿಸಿದರು.

              ಚಿತ್ರ ಪ್ರದರ್ಶನ ತಡೆಯುವ ಉದ್ದೇಶದಿಂದ ಹಲವು ಬಾರಿ ವಿದ್ಯುತ್ ಕಡಿತಗೊಳಿಸಲಾಗಿತ್ತು ಎಂದು ಎಬಿವಿಪಿ ಆರೋಪಿಸಿದೆ. ಆದರೆ, ಈ ಚಿತ್ರ ಪ್ರದರ್ಶನಕ್ಕೆ ಎಡಪಂಥೀಯ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

               ಈ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಜೆಎನ್‌ಯುಎಸ್‌ಯು ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಚಿತ್ರ ಪ್ರದರ್ಶನ ಮಾಡಿರುವುದು ಚುನಾವಣಾ ನೀತಿ ಸಂಹಿತೆಯ ಭಾಗಶಃ ಉಲ್ಲಂಘನೆ ಎಂದು ವಿಶ್ವವಿದ್ಯಾಲಯದ ಚುನಾವಣಾ ಸಮಿತಿ ಹೇಳಿದೆ.

             ಈ ಸಂಬಂಧ ಪ್ರತಿಕ್ರಿಯಿಸಿದ ಚುನಾವಣಾ ಸಮಿತಿಯ ಅಧ್ಯಕ್ಷ ಶೈಲೇಂದ್ರ ಕುಮಾರ್, 'ಜೆಎನ್‌ಯುನ ಕಾನ್ವೆನ್ಷನ್ ಕೇಂದ್ರದಲ್ಲಿ ಬುಧವಾರ 'ಬಸ್ತರ್: ದ ನಕ್ಸಲೈಟ್ ಸ್ಟೋರಿ' ಪ್ರದರ್ಶನ ಮಾಡಿರುವುದು ಗೊತ್ತಾಗಿದೆ. ಈ ಕುರಿತು ನಮಗೆ ಯಾವುದೇ ಮಾಹಿತಿ ನೀಡರಲಿಲ್ಲ. ಜೊತೆಗೆ ಈ ಕಾರ್ಯಕ್ರಮ ಆಯೋಜನೆಗೆ ಅನುಮತಿಯನ್ನೂ ಪಡೆದಿರಲಿಲ್ಲ' ಎಂದು ತಿಳಿಸಿದ್ದಾರೆ.

                       ಜೆಎನ್‌ಯು ವಿದ್ಯಾರ್ಥಿ ಒಕ್ಕೂಟಕ್ಕೆ ಇದೇ 22ರಂದು ಚುನಾವಣೆ ನಡೆಯಲಿದ್ದು, 24ರಂದು ಫಲಿತಾಂಶ ಪ್ರಕಟವಾಗಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries