HEALTH TIPS

ಕೆ-ಟೆಟ್ ಸರ್ಟಿಫಿಕೇಟ್-ನಾಳೆಯಿಂದ ಪರಿಶೀಲನೆ

          ಕಾಸರಗೋಡು: ಶ್ರೈಕ್ಷಣಿಕ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ 2023ರ ಅಕ್ಟೋಬರ್ ಅಧಿಸೂಚನೆಯ ಪ್ರಕಾರ ಕೆ-ಟೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಅರ್ಹತಾ ಪ್ರಮಾಣಪತ್ರಗಳ ಪರಿಶೀಲನೆಯನ್ನು ಮಾರ್ಚ್ 22 ರಿಂದ 27 ರವರೆಗೆ ನಡೆಸಲಾಗುವುದು. 

             ಮಾರ್ಚ್ 22 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1 ರವರೆಗೆ ಕ್ಯಾಟಗರಿ ಒಂದು, 23 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1 ರವರೆಗೆ ಕ್ಯಾಟಗರಿ ಎರಡು, 25 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1 ರವರೆಗೆ ಕ್ಯಾಟಗರಿ ಮೂರು, 26 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1 ರವರೆಗೆ ಕ್ಯಾಟಗರಿ ನಾಲ್ಕು, 27 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1 ರವರೆಗೆ ಹಿಂದಿನ ವರ್ಷಗಳ ಉಳಿದ ಎಲ್ಲಾ ಕ್ಯಾಟಗರಿಯಲ್ಲಿರುವವರು ಪರಿಶೀಲನೆಗೆ ಹಾಜರಾಗಬೇಕು.  ಅರ್ಹ ಅಭ್ಯರ್ಥಿಗಳು ಕೆ-ಟೆಟ್ ಹಾಲ್ ಟಿಕೆಟ್, ಶೈಕ್ಷಣಿಕ ಅರ್ಹತಾ ಪ್ರಮಾಣಪತ್ರಗಳ ಮೂಲ ಮತ್ತು ಮಾರ್ಕ್ ಲಿಸ್ಟ್, ಜಾತಿಯ ಸವಲತ್ತುಗಳಿಗೆ ಅರ್ಹರಾಗಿರುವವರು ಅವುಗಳನ್ನು ಸಾಬೀತುಪಡಿಸಲಿರುವ ಪ್ರಮಾಣಪತ್ರಗಳು ಮತ್ತು ಅವುಗಳ ನಕಲುಗಳೊಂದಿಗೆ ಕಾಸರಗೋಡು ಜಿಲ್ಲಾ ಶಿಕ್ಷಣ ಕಚೇರಿಗೆ ಹಾಜರಾಗಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ( 04994 230)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries