ಬದಿಯಡ್ಕ: ಎಡನೀರು ಸಮೀಪದ ಪಾಡಿ ಕೈಲಾರ್ ಶ್ರೀಶಿವಕ್ಷೇತ್ರದಲ್ಲಿ ಶುಕ್ರವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಮಹಾಶಿವರಾತ್ರಿ ಆಚರಣೆ ನಡೆಯಿತು.
ಬೆಳಿಗ್ಗೆ 8ಕ್ಕೆ ಉಷಃಪೂಜೆ, 9.30ಕ್ಕೆ ಸಂಕಲ್ಪಾಭಿಷೇಕ, ಏಕಾದಶ ರುದ್ರಾಭಿಷೇಕ, 11 ರಿಂದ ಬ್ರಾಹ್ಮಣ ಒಕ್ಕೂಟ ವನಿತಾದೇವಿ ತಂಡ ಕಾಞಂಗಾಡ್ ಇವರಿಂದ ಭಜನೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಿತು. ರಾತ್ರಿ 7.30 ರಿಂದ ರಾತ್ರಿಪೂಜೆ, 8ಕ್ಕೆ ತಿರುವಾದಿರ ನಡೆಯಿತು.
ಸಮಾರಂಭದ ಅಂಗವಾಗಿ ಬೆಳಿಗ್ಗೆ 8.30 ರಿಂದ ನಡೆದ ಧಾರ್ಮಿಕ ಸಭೆಯಲ್ಲಿ ಹರಿಹರ ಸೇವಾ ಸಮಿತಿ ಅಧ್ಯಕ್ಷ ಎಂ.ಜೆ.ಹರಿಪ್ರಸಾದ್ ಪಾಡಿ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ಇರುವೈಲ್ ಐ.ಕೆ.ಕೇಶವ ತಂತ್ರಿ ಉದ್ಘಾಟಿಸಿದರು. ಡಾ.ಕೆ.ಎಂ.ಮಂಜುನಾಥ ಶೆಟ್ಟಿ, ಮಧು ಕೆ., ಸಿ.ಆರ್.ಗಂಗಾಧರನ್ ನಾಯರ್, ವಿನೋದ್ ಕುಮಾರ್ ಟಿ.ಜಿ. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಿ.ಕೆ.ವೇಣುಗೋಪಾಲನ್ ಸ್ವಾಗತಿಸಿ, ವಿ.ಎನ್.ರವೀಂದ್ರನ್ ವಂದಿಸಿದರು.
ಬಳಿಕ ವಿದ್ವಾನ್.ಯೋಗೀಶ ಶರ್ಮ ಬಳ್ಳಪದವು ಮತ್ತು ತಂಡದವರಿಂದ ‘ನಾದಮಾಧುರಿ’ ಗಾಯನ ಕಾರ್ಯಕ್ರಮ ನಡೆಯಿತು.ತಿರುನಲ್ಲೂರ್ ಅಜಿತ್(ವಯೋಲಿನ್), ಚೇರ್ತಲ ಜಿ.ಕೃಷ್ಣಕುಮಾರ್(ಮೃದಂಗ)ಶಿನು ಗೋಪಿನಾಥ್ ಕೊಟ್ಟಾಯಂ(ಘಟಂ), ವೈಕ್ಕಂ ರತ್ನಶ್ರೀ ಅಯ್ಯರ್(ತಬ್ಲಾ)ದಲ್ಲಿ ಸಾಥ್ ನೀಡಿದರು.

.jpg)
.jpg)
.jpg)
