ಉಪ್ಪಳ: ದೇಶದಲ್ಲಿ ಉಂಟಾಗಿರುವ ಅಭಿವೃದ್ದಿ ನಮ್ಮಲ್ಲೂ ಸಾಕಾರವಾಗಬೇಕಾದರೆ ನಮ್ಮಲ್ಲಿಯೂ ಬಿಜೆಪಿ ಗೆಲುವು ಅನಿವಾರ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ್ ತಂತ್ರಿ ಕುಂಟಾರು ಹೇಳಿದರು.
ಮಂಜೇಶ್ವರ ಮಂಡಲ ಚುನಾವಣಾ ಕಚೇರಿಯನ್ನು ಉಪ್ಪಳ ಭಗವತೀ ಗೇಟ್ ಬಳಿ ಶುಕ್ರವಾರ ದೀಪ ಬೆಳಗಿಸಿ ಅವರು ಉದ್ಘಾಟಿಸಿ ಮಾತನಾಡಿದರು.
ಲೋಕಸಭಾ ಚುನಾವಣಾ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಉಪಸ್ಥಿತರಿದ್ದರು. ಮುಖಂಡರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ನ್ಯಾಯವಾದಿ. ಬಾಲಕೃಷ್ಣ ಶೆಟ್ಟಿ, ಎ.ಕೆ. ಕೈಯಾರ್, ವಿಜಯ್ ಕುಮಾರ್ ರೈ, ಸುಧಾಮ ಗೋಸಾಡ, ವಸಂತ ಮಯ್ಯ, ಜಯಂತಿ ಶೆಟ್ಟಿ, ಬಾಬು ಕುಬಣೂರು ಉಪಸ್ಥಿತರಿದ್ದರು. ಆದರ್ಶ್ ಬಿ.ಎಂ. ಸ್ವಾಗತಿಸಿ, ಸುನಿಲ್ ಅನಂತಪುರ ವಂದಿಸಿದರು.

.jpg)
