ಕಾಸರಗೋಡು: ಭಾರತೀಯ ವಕೀಲರ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಕಾಸರಗೋಡು ವಿದ್ಯಾನಗರ ಎಎಸ್‍ಎಪಿ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮವನ್ನು ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ, ವಕೀಲ ಎ. ಸಿ ಅಶೋಕ್ ಕುಮಾರ್ ಉದ್ಘಾಟಿಸಿದರು.
ಹಿರಿಯ ವಕೀಲ ಹಾಗೂ ಕೋರ್ಡಿನೇಟರ್ ಆಗಿರುವ ವಕೀಲ ಆಲಿಸ್ ಕೃಷ್ಣನ್ ಮುಖ್ಯ ಭಾಷಣ ಮಾಡಿದರು. ವಕೀಲೆ ಬೀನಾ ಕೆ.ಎಂ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಉಪಾಧ್ಯಕ್ಷ ಬಿ.ರವೀಂದ್ರನ್, ರಾಜ್ಯ ಸಮಿತಿ ಸದಸ್ಯ ಕರುಣಾಕರನ್ ನಂಬಿಯಾರ್, ಜಿಲ್ಲಾ ಕಾರ್ಯದರ್ಶಿ ಪಿ.ಮುರಳೀಧರನ್ ವಂದಿಸಿದರು. ಕುಸುಮಾ ಎಂ ಸ್ವಾಗತಿಸಿದರು. ಅಕ್ಷತಾ ಎಂ. ಎ ವಂದಿಸಿದರು.

