ಪೆರ್ಲ: ನಾಲಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ(ಎನ್ನೆಸ್ಸೆಸ್) ಘಟಕ ಸಂಖ್ಯೆ 49, ನೆಹರು ಯುವ ಕೇಂದ್ರ ಮತ್ತು ಕಾಸರಗೋಡು ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.
ಕಾಲೇಜು ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಯುವಜನ ಕ್ಷೇಮಾಧಿಕಾರಿ ಅಖಿಲ್ ಪಿ.ಉದ್ಘಾಟಿಸಿದರು. ಕಾರ್ಯಕ್ರಮದ ಅಂಗವಾಗಿ ನಾರಿ ಶಕ್ತಿ ಫಿಟ್‍ನೆಸ್ ಓಟ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಕಾಲೇಜು ಪ್ರಾಂಶುಪಾಲ ಶಂಕರ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ನಿಶ್ಮಿತಾ ಮಹಿಳಾ ದಿನಾಚರಣೆಯ ಸಂದೇಶ ಸಾರಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಕಾವ್ಯಾ ಚಂದ್ರನ್ ಸ್ವಾಗತಿಸಿದರು. ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಸ್ವಯಂಸೇವಕಿ ರೇಣುಕಾ ವಂದಿಸಿದರು. ನಾರಿ ಶಕ್ತಿ ಫಿಟ್ನೆಸ್ ಓಟದಲ್ಲಿ ಅನುಜ್ಞಾ, ನಿಶಾ ಮತ್ತು ಧನ್ಯಶ್ರೀ ಬಿ. ಬಹುಮಾನ ಪಡೆದರು.


