HEALTH TIPS

ಏ. 23ರಂದು ಶ್ರೀಎಡನೀರು ಮಠದಲ್ಲಿ ಮಹಾ ಶ್ರೀಚಕ್ರ ನವಾವರಣ ಪೂಜೆ

                   ಕಾಸರಗೋಡು: ಮಹಾ ಶ್ರೀಚಕ್ರ ನವಾವರಣ ಪೂಜೆ ಏ. 23ರಂದು ಮಧ್ಯಾಹ್ನ 2ಗಂಟೆಗೆ ಶ್ರೀಎಡನೀರು ಮಠದಲ್ಲಿ ನಡೆಯುವುದು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಆಶೀರ್ವಾದ ಹಾಗೂ ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಚಿನ್ಮಯಾ ಮಿಷನ್ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ ಅವರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿರುವುದು.

                   ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ ಅವರ ತಾಂತ್ರಿಕತ್ವದಲ್ಲಿ ಕಾರ್ಯಕ್ರಮ ನಡೆಯುವುದು. ಬೆಳಗ್ಗೆ 11.30ಕ್ಕೆ ಚಂಡಿಕಾ ಹವನ ನಡೆಯುವುದು. ವೇದ ಮೂರ್ತಿ ನರಸಿಂಹ ಅಡಿಗ ಕೊಲ್ಲೂರು ಪೌರೋಹಿತ್ಯ ವಹಿಸುವರು. ಮಧ್ಯಾಹ್ನ 2.30ಕ್ಕೆ ವಿದ್ವಾನ್ ಬಳ್ಳಪದವು ಯೋಗೀಶ ಶರ್ಮ ಮತ್ತು ಬಳಗದವರಿಂದ ನವಾವರಣ ಕೃತಿ ಆಲಾಪನೆ ನಡೆಯುವುದು. ವಯಲಿನ್‍ನಲ್ಲಿ ವಿದ್ವಾನ್ ಹೇಮಂತ್‍ಕುಮಾರ್ ಬೆಂಗಳೂರು, ಮೃದಂಗದಲ್ಲಿ ವಿದ್ವಾನ್ ಆನೂರ್ ದತ್ತಾತ್ರೇಯ ಶರ್ಮ ಬೆಂಗಳೂರು ಹಾಗೂ ಘಟಂನಲ್ಲಿ ವಿದ್ವಾನ್ ಫಣೀಂದ್ರ ಬೆಂಗಳೂರು ಸಹಕರಿಸುವರು. ಸಂಜೆ 6ಕ್ಕೆ ನಡೆಯುವ ಅಷ್ಟಾವಧಾನ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಕಾರಂತ ಪ್ರಸ್ತುತಿ ನಡೆಸುವರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries