HEALTH TIPS

ಲೋಕಸಭಾ ಚುನಾವಣೆ-ಕಾಸರಗೋಡಿನಲ್ಲಿ ಶಾಂತ ಮತದಾನ: ಅವಧಿಮೀರಿ ಮುಂದುವರಿದ ಮತದಾನ

          ಕಾಸರಗೋಡು: ಲೋಕಸಭಾ ಚುನಾವಣೆಗೆ ಶುಕ್ರವಾರ ನಡೆದ ಮತದಾನ ಕೆಲವೊಂದು ಸಣ್ಣಪುಟ್ಟ ಘರ್ಷಣೆ ಹೊರತಾಗಿ ಕಾಸರಗೋಡು ಜಿಲ್ಲಾದ್ಯಂತ ಶಾಂತರೀತಿಯಲ್ಲಿ ಪೂರ್ಣಗೊಂಡಿದೆ. ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ನಿಗದಿಪಡಿಸಲಾಗಿದ್ದರೂ, ಈ ಕಾಲಾವಧಿಯೊಳಗೆ ಸರತಿಸಾಲಲ್ಲಿ ನಿಂತವರಿಗಾಗಿ ಮತದಾನ ರಾತ್ರಿ ವರೆಗೂ ಮುಂದುವರಿದಿತ್ತು.

        ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಪಯ್ಯನ್ನೂರು ಕ್ಷೇತ್ರದಲ್ಲಿ ಅತ್ಯಧಿಕ(ಶೇ.78.50) ಹಾಗೂ ಅತೀ ಕಡಿಮೆ ಕಾಸರಗೋಡು ಕ್ಷೇತ್ರದಲ್ಲಿ(ಶೇ.69.05)ದಾಖಲಾಗಿದೆ. ಬಹುತೇಕ ಮತಗಟ್ಟೆಗಳಲ್ಲಿ ಬೆಳಗ್ಗಿನಿಂದಲೇ ನಿಧಾನಗತಿಯಲ್ಲಿ ಮತದಾನ ಸಾಗಿ ಬಂದಿತ್ತು. ಕೆಲವು ಸಿಬ್ಬಂದಿ ಹೆಚ್ಚಿನ ವಿಳಂಬವುಂಟುಮಾಡುತ್ತಿರುವುದಾಗಿ ಮತದಾರರು ತಮ್ಮ ಅಸಮಧಾನ ವ್ಯಕ್ತಪಡಿಸುತ್ತಿದ್ದರು. ಮತದಾನದ ಕಾಲಾವಧಿ ಕಳೆದರೂ, ಕೆಲವೊಂದು ಮತಗಟ್ಟೆಗಳಲ್ಲಿ ಉದ್ದನೆಯ ಸರತಿಸಾಲು ಕಂಡುಬಂದಿತ್ತು. ಜಿಲ್ಲೆಯ ಕೆಲವೊಂದು ಮತಗಟ್ಟೆಗಳಲ್ಲಿ ಇವಿಎಂ ಕಾರ್ಯಾಚರಣೆಯಲ್ಲಿ ಆರಂಭದಲ್ಲಿ ಕೆಲವೊಂದು ಅಡಚಣೆಗಳುಂಟಾದರೂ, ನಂತರ ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅವರು ಬಡಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ನಡೆಸಿದರು. 

ಬಿಗು ಬಂದೋಬಸ್ತ್:

          ಕೇಂದ್ರ ಮೀಸಲು ಪಡೆ, ಸಶಸ್ತ್ರ ಪಡೆ, ಸ್ಥಳೀಯ ಪೊಲೀಸ್ ಸೇರಿದಂತೆ ಜಿಲ್ಲಾದ್ಯಂತ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಒಂದುಸಾವಿರಕ್ಕೂ ಹೆಚ್ಚು ಮಂದಿ ಕರ್ನಾಟಕ ಪೊಲೀಸರನ್ನು ಕೇರಳದ ವಿವಿಧೆಡೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅದೇ ರೀತಿ ಕೇರಳದ ಪೊಲೀಸರನ್ನು ಕರ್ನಾಟಕದಲ್ಲಿ ನಿಯೋಜಿಸಲಾಗಿದೆ.


ನಕಲಿ ಮತದಾನ-ಎಡರಂಗದಿಂದ ದೂರು:

ಚೆರ್ಕಳದ ವಿವಿಧ ಮತಗಟ್ಟೆಗಳಲ್ಲಿ  ಐಕ್ಯರಂಗದಿಂದ ವ್ಯಾಪಕ ನಕಲಿ ಮತದಾನ ನಡೆದಿರುವ ಬಗ್ಗೆ  ಎಡರಂಗ ಲೋಕಸಭಾ ಕ್ಷೇತ್ರ ಸಮಿತಿ ಸಂಚಾಲಕ ಕೆ.ಪಿ ಸತೀಶ್ಚಂದ್ರನ್ ದೂರು ಸಲ್ಲಿಸಿದ್ದಾರೆ.  ಚಎರ್ಕಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 113, 114 ಹಾಗೂ 115, ಚೆರ್ಕಳ ಎಎಲ್‍ಪಿ ಶಾಲೆಯ 106 ಹಾಗೂ 107ನೇ ಮತಗಟ್ಟೆಗಳಲ್ಲಿ ಮತಗಟ್ಟೆ ಸಿಬ್ಬಂದಿಗೆ ಬೆದರಿಕೆಯೊಡ್ಡಿ ನಕಲಿ ಮತದಾನ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಕಲಿ ಮತದಾನದ ಬಗ್ಗೆ ಮಾಹಿತಿ ಸಂಗ್ರಹಿಸಲು ತೆರಳಿದ್ದ ಕೆಲವು ಮಾಧ್ಯಮ ಪ್ರತಿನಿಧಿಗಳಿಗೂ ಅಲ್ಲಿನ ತಂಡವೊಂದು ಹಲ್ಲೆ ನಡೆಸಿದೆ.

ಕಾಂಗ್ರೆಸ್ ಮುಖಂಡಗೆ ಹಲ್ಲೆ:

ತಂಡವೊಂದು ಹಲ್ಲೆ ನಡೆಸಿದ ಪರಿಣಾಮ ಪಿಲಿಕೋಡ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಕುಞÂಕೃಷ್ಣನ್ ಗಾಯಗೊಂಡಿದ್ದಾರೆ. ಗಾಯಾಳು ಚೆರ್ವತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಪಿಎಂ ಕಾರ್ಯಕರ್ತರು ಹಲ್ಲೆ ನಡೆಸಿರುವುದಾಗಿ ಗಾಯಾಳು ದೂರಿದ್ದಾರೆ. ಪುತ್ತಿಯೋಟ್ ಎಯುಪಿ ಶಾಲಾ 120ನೇ ಮತಗಟ್ಟೆ ವ್ಗಯಾಪ್ತಿಯಲ್ಲಿ ತಂಡ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ.


ಮಾಕೂಟ್ ಶಾಲಾ ಮತಗಟ್ಟೆಯೊಂದರಲ್ಲಿ ಮತದಾನದ ಕಾಲಾವಧಿ ಕಳೆದ ನಂತರವೂ ಉದ್ದನೆಯ ಸರತಿಸಾಲು ಕಂಡುಬಂತು.

: ಕಾಸರಗೋಡು ಕೂಡ್ಲು ಶಾಲಾ ಮತಗಟ್ಟೆಯೊಂದರಲ್ಲಿ ವಿಕಲಚೇತನರೊಬ್ಬರನ್ನು ಗಾಲಿಕುರ್ಚಿಯಲ್ಲಿ ಕರೆದೊಯ್ಯುತ್ತಿರುವ ಸಿಬ್ಬಂದಿ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries