ಕಾಸರಗೋಡು: ಅಖಿಲ ಕೇರಳ ಮೋಹನ್ ಲಾಲ್ ಫ್ಯಾನ್ಸ್ ಕಲ್ಚರಲ್ ವೆಲ್ಫೇರ್ ಅಸೋಸಿಯೇಶನ್ ಹಾಗೂ ಮಹಿಳಾ ಘಟಕದ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಕ್ಯಾನ್ಸರ್ ಬಳಲುತ್ತಿರುವ ಅಲನ್ ದೀಪೇಶ್ ಚಿಕಿತ್ಸಾ ನೆರವು ಹಸ್ತಾಂತರಿಸಲಾಯಿತು.
ಜಿಲ್ಲಾಧ್ಯಕ್ಷ ರಾಜೇಶ್ ಫ್ಲವರ್, ಕಾರ್ಯದರ್ಶಿ ಮಹೇಶ್ ಮಾಳವಿಕ, ಮಹಿಳಾ ಘಟಕದ ಅಧ್ಯಕ್ಷೆ ದಿವ್ಯಾ ರಾಜೇಶ್, ಕಾರ್ಯದರ್ಶಿ ಜಿನ್ಶಾ, ರಾಜ್ಯ ಸಮಿತಿ ಸದಸ್ಯ ರಾಜನ್ ಕೆ ಪೆÇಯಿನಾಚಿ, ಕಾಸರಗೋಡು ಏರಿಯಾ ಸಮಿತಿಯ ಅಧ್ಯಕ್ಷ ಬಿಜುರಾಜ್, ವೈದ್ಯಕೀಯ ಬೆಂಬಲ ಸಮಿತಿಯ ಸದಸ್ಯರುಗಳಾದ ಶೈಲೇಶ್, ಪ್ರೇಮರಾಜನ್, ಅನಿಲ್‍ಕುಮಾರ್ ಮತ್ತು ನಾರಾಯಣನ್ ನಾಯರ್ ಪರಿಹಾರ ನಿಧಿ ಸ್ವೀಕರಿಸಿದರು. ಮಲಯಾಳ ಚಿತ್ರರಂಗದ ಖ್ಯಾತ ನಟ ಮೋಹನ್‍ಲಾಲ್ ಹುಟ್ಟುಹಬ್ಬದ ಅಂಗವಾಗಿ ಮೋಹನ್ ಲಾಲ್ ಫ್ಯಾನ್ಸ್ ಸಂಘಟನೆಗಳಿಂದ ರಾಜ್ಯಾದ್ಯಂತ ಸಮಾಜಮುಖಿ ಚಟುವಟಿಕೆ, ರಕ್ತದಾನ ಶೀಬಿರ ಸೇರಿದಂತೆ ನಾನಾ ಕಾರ್ಯಕ್ರಮ ನಡೆಯಿತು.





