HEALTH TIPS

ಕಣಿಹಿತ್ತಿಲು ಶ್ರೀಮಲರಾಯಿ ಧೂಮಾವತೀ ಪಂಜುರ್ಲಿ ನಾಗ ಪರಿವಾರ ದೈವಸ್ಥಾನದ ವಾರ್ಷಿಕ ಮಹಾ ಸಭೆ: ನೂತನ ಪದಾಧಿಕಾರಿಗಳ ಆಯ್ಕೆ

           ಉಪ್ಪಳ: ಬಾಯಾರು ಗ್ರಾಮದ ಕಣಿಹಿತ್ತಿಲು ಶ್ರೀಮಲರಾಯಿ ಧೂಮಾವತೀ ಪಂಜುರ್ಲಿ ನಾಗ ಪರಿವಾರ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಬಳಿಕ ವಾರ್ಷಿಕ ಮಹಾ ಸಭೆ ಇತ್ತೀಚೆಗೆ ನಡೆಯಿತು.

           ಬಂಟಪ್ಪ ಪೂಜಾರಿ ನೇರೊಳ್ತಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂಧರ್ಭದಲ್ಲಿ ಕಳೆದ ವಾರ್ಷಿಕ ಉತ್ಸವದ ಲೆಕ್ಕಪತ್ರ ಮಂಡನೆಯನ್ನು ಪ್ರೇಮ್ ಜೀತ್ ಕಾಸರಗೋಡು ನಿರ್ವಹಿಸಿದರು. ಕಾರ್ಯದರ್ಶಿ ನಾರಾಯಣ ಕೊರಕ್ಕೋಡು, ಕೋಶಾಧಿಕಾರಿ ಕೃಷ್ಣ ಕುಮಾರ್ ಅಲೆಕ್ಕಾಡಿ, ವಿಜೇಯೆಶ್ ಕಾನ, ಶ್ರೀಧರ್ ಬಾಳೆಕಲ್ಲು, ಮೊದಲಾದವರು ಉಪಸ್ಥಿತರಿದ್ದರು.

          ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ 

ಕೊರಗಪ್ಪ ಸ್ವಾಮಿ ಕಾಸರಗೋಡು, ಕೃಷ್ಣಪ್ಪ ಪೂಜಾರಿ, ಬಂಟಪ್ಪ ಪೂಜಾರಿ ನೇರೊಳ್ತಡಿ, ನಾರಾಯಣ ಕೊರೊಕ್ಕೊಡು, ಕೃಷ್ಣ ಕುಮಾರ್ ಅಲೆಕ್ಕಾಡಿ, ಕೊರಗಪ್ಪ ಪೂಜಾರಿ ಸುಣ್ಣಾಡ, ಕಾಂತಪ್ಪ ಬಂಗೇರ ಬಳಂತಿಮುಗೇರು, ಅಧ್ಯಕ್ಷರಾಗಿ ಶ್ರೀಧರ್ ಬಾಳೆಕಲ್ಲು ಕುದ್ವಶಾಖೆ, ಉಪಾಧ್ಯಕ್ಷರಾಗಿ ಸತೀಶ್ ಗುಂಡ್ಯಡ್ಕ ಶಾಖೆ, ಶ್ರೀಧರ್ ಕುಕ್ಕಾಜೆ ಪೆಲ್ತಡಿ ಶಾಖೆ, ಕಾರ್ಯದರ್ಶಿಯಾಗಿ ಚಿದಾನಂದ ಕೆಮನಾಜೆ ಶಾಖೆ, ಜೊತೆ ಕಾರ್ಯದರ್ಶಿಗಳಾಗಿ ದಿನೇಶ್ ಬಂಬ್ರಾಣ ಬೆಳ್ಳೂರು ಶಾಖೆ, ಪುನೀತ್ ಕೆಮ್ಮಣ್ಣು ಶಾಖೆ, ಕೋಶಾಧಿಕ್ಕಾರಿಯಾಗಿ ವಿಜೇಯೆಶ್ ಕಾನ,ಲೆಕ್ಕ ಪರಿಶೋಧಕರಾಗಿ ಪ್ರೇಮ್ ಜೀತ್ ಕಾಳ್ಯಾಂಗಾಡು ಶಾಖೆ, ಹಾಗೂ 20 ಮಂದಿಯನ್ನು ಕಾರ್ಯಕಾರಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ನಾರಾಯಣ ಕೊರೊಕ್ಕೊಡು ಸ್ವಾಗತಿಸಿ ಪ್ರೇಮ್ ಜೀತ್ ಕಾಸರಗೋಡು ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries