ಪೆರ್ಲ : ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಜೇಶ್ವರ ತಾಲೂಕು ಸಮಿತಿ ವತಿಯಿಂದ 1801ನೇ ಮದ್ಯವರ್ಜನ ಶಿಬಿರ ಪೆರ್ಲ ಸನಿಹದ ಇಡಿಯಡ್ಕದ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಅನ್ನಪೂರ್ಣೇಶ್ವರಿ ಸಭಾಂಗಣದಲ್ಲಿ ಮಂಗಳವಾರ ಸಂಪನ್ನಗೊಂಡಿತು.
ಕಳೆದ ಎಂಟು ದಿವಸಗಳಿಂದ ಶಿಬಿರದಲ್ಲಿ ನಿತ್ಯ ಯೋಗ, ವಟರ ಸ್ವಚ್ಛತೆ, ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ, ಕೌಟುಂಬಿಕ ಸಲಹೆ ಪಡೆದುಕೊಳ್ಳುವುದರ ಜತೆಗೆ ಸಾಂಸ್ಕøತಿಕ ಕಾರ್ಯಕ್ರಮ, ಶಾರೀರಿಕ ಗುಂಪು ಚುಟವಟಿಕೆಗಳಲ್ಲಿ ಪಾಲ್ಗೊಂಡಿದ್ದ 76ಮಂದಿ ಶಿಬಿರಾರ್ಥಿಗಳು ಮಂಗಳವಾರ ಶ್ವೇತವಸ್ತ್ರಧಾರಿಗಳಾಗಿ ದೃಢನಿರ್ಧಾರದ ಪ್ರತಿಜ್ಞೆ ಕೈಗೊಳ್ಳುವ ಮೂಲಕ ಹಿಂತೆರಳಿದರು.
ಬೆಳ್ತಂಗಡಿಯ ಅಖಿಲ ಕನಾಟಕ ರಾಜ್ಯ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಅವರು ಕುಟುಂಬ ದಿನದ ಅಂಗವಾಗಿ ನಡೆಸಿಕೊಟ್ಟ ಸುದೀರ್ಘ ಮೂರು ತಾಸುಗಳ ಮನಮಿಡಿಯುವ ಮಾಹಿತಿಯಿಂದ ಶಿಬಿರಾರ್ಥಿಗಳ ಕಣ್ಣು ತೇವಗೊಂಡಿತ್ತು.
ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ, ಮಂಜುನಾಥೇಶ್ವರ ವ್ಯಸನಮುಕ್ತ ಮತ್ತು ಸಂಶೋಧನ ಕೇಂದ್ರ ಉಜಿರೆ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಇದರ ಮಾರ್ಗದರ್ಶನದೊಂದಿಗೆ ಪ್ರಗತಿ ಬಂಧು ಸ್ವಸಹಾಯ ಸಂಘ ಒಕ್ಕೂಟ ಪೆರ್ಲ ವಲಯ, ನವಜೀವನ ಸಮಿತಿ, ಸ್ಥಳೀಯರ ಸಹಕಾರದೊಂದಿಗೆ ಶಿಬಿರ ಆಯೋಜಿಸಲಾಗಿತ್ತು. ಸಮಾರೋಪ ಸಮಾರಂಬದಲ್ಲಿ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಸದಾನಂದ ಶೆಟ್ಟಿ ಕುದ್ವ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಜನಜಾಗೃತಿ ವೇದಿಕೆ ಮಂಜೇಶ್ವರ ತಾಲೂಕು ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೊಡಿ, ಉಪಾಧ್ಯಕ್ಷ ಹರೀಶ್ ಶೆಟ್ಟಿ ಕಡಂಬಾರ್, ನಿಕಟಪೂರ್ವ ಅದ್ಯಕ್ಷ ಅಶ್ವಥ್ ಲಾಲ್‍ಬಾಗ್, ಕಾಸರಗೋಡು ಘಟಕ ಅಧ್ಯಕ್ಷ ಅಖಿಲೇಶ್ ನಗುಮುಗಂ, ಡಾ. ಜಯಗೋವಿಂದ ಉಕ್ಕಿನಡ್ಕ, ರಮಾನಾಥ ರೈ ಮೇಗಿನಕಡಾರ್, ಭಜನಾಪರಿಷತ್ ಅಧ್ಯಕ್ಷ ದಿನೇಶ್ ಚೆರುಗೋಳಿ, ಜನಜಾಗೃತಿ ವೇದಿಕೆಯ ಪ್ರವೀಣ್ ಕುಮಾರ್, ಉಡುಪಿ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಅಚಾಯ್ ಮೊದಲದವರು ಉಪಸ್ಥಿತರಿದ್ದರು. ಶಶಿಕಲಾ ಸುವರ್ಣ ಸ್ವಗತಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು. ಪೆರ್ಲ ವಲಯ ಮೇಲ್ವಿಚಾರಕಿ ಜಯಶ್ರೀ ವಂದಿಸಿದರು.






