HEALTH TIPS

ತೈವಾನ್ ದ್ವೀಪದ ಬಳಿ ಚೀನಾದ 41 ಯುದ್ಧವಿಮಾನ: ವರದಿ

          ತೈಪೆ: ಶನಿವಾರ ಬೆಳಗ್ಗಿನವರೆಗಿನ 24 ಗಂಟೆ ಅವಧಿಯಲ್ಲಿ ತೈವಾನ್ ದ್ವೀಪದ ಸುತ್ತಲೂ ಚೀನಾ ಮಿಲಿಟರಿಗೆ ಸೇರಿದ 41 ಯುದ್ಧವಿಮಾನಗಳನ್ನು ಪತ್ತೆಹಚ್ಚಿರುವುದಾಗಿ ತೈವಾನ್‍ನ ರಕ್ಷಣಾ ಸಚಿವಾಲಯ ಶನಿವಾರ ಹೇಳಿದೆ.

         ತೈವಾನ್ ಸ್ವಾತಂತ್ರ್ಯದ ಬಗ್ಗೆ ಪಟ್ಟುಬಿಡದೆ ಪ್ರತಿಪಾದಿಸುವವರು ಮರಣದಂಡನೆಗೆ ಗುರಿಯಾಗಲಿದ್ದಾರೆ ಎಂದು ಚೀನಾ ಎಚ್ಚರಿಕೆ ನೀಡಿದ ಬಳಿಕದ ಬೆಳವಣಿಗೆ ಇದಾಗಿದೆ.

           ಸ್ವಯಂ ಆಡಳಿತದ ಪ್ರಜಾಪ್ರಭುತ್ವ ವ್ಯವಸ್ಥೆಯ ತೈವಾನ್ ತನ್ನ ಪ್ರದೇಶದ ಭಾಗವಾಗಿದ್ದು ಅದನ್ನು ತನ್ನ ನಿಯಂತ್ರಣಕ್ಕೆ ತರಲು ಬಲಪ್ರಯೋಗಕ್ಕೂ ಹಿಂಜರಿಯುವುದಿಲ್ಲ ಎಂದು ಚೀನಾ ಹೇಳುತ್ತಿದೆ. ತೈವಾನ್ ಸುತ್ತಮುತ್ತ ಸಮರಾಭ್ಯಾಸ ನಡೆಸಿ ಒತ್ತಡ ಹೇರುತ್ತಿರುವ ಚೀನಾ, ಕಳೆದ ತಿಂಗಳು ಲಾಯ್ ಚಿಂಗ್‍ಟೆ ತೈವಾನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಒತ್ತಡ ತಂತ್ರವನ್ನು ಹೆಚ್ಚಿಸಿದೆ.

ಚೀನಾದ 41 ಯುದ್ಧವಿಮಾನಗಳು ಹಾಗೂ ನೌಕಾಪಡೆಯ 7 ನೌಕೆಗಳು ತೈವಾನ್ ಸುತ್ತ ಕಂಡುಬಂದಿವೆ. ಇದರಲ್ಲಿ 32 ಯುದ್ಧವಿಮಾನಗಳು ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ದಾಟಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಲಾಗುವುದು ಎಂದು ತೈವಾನ್‍ನ ವಿದೇಶಾಂಗ ಸಚಿವಾಲಯ ಶನಿವಾರ ಹೇಳಿದೆ. ಚೀನಾದಿಂದ ತೈವಾನನ್ನು ಬೇರ್ಪಡಿಸುವ 180 ಕಿ.ಮೀ ಜಲಮಾರ್ಗವನ್ನು ವಿಭಜಿಸುವ ರೇಖೆಯನ್ನು ಮಧ್ಯದ ರೇಖೆಯೆಂದು ಗುರುತಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries