HEALTH TIPS

ಉಪ್ಪಳದ ಫ್ಲ್ಯಾಟ್‍ನಲ್ಲಿ ಜೀರ್ಣಗೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆ

 

              ಉಪ್ಪಳ: ಉಪ್ಪಳದ ಫ್ಲ್ಯಾಟ್ ಒಂದರಲ್ಲಿ ಆನೆಕಲ್ಲು ನಿವಾಸಿಯೊಬ್ಬರ ಮೃತದೇಹ ಪತ್ತೆಯಾಘಿದೆ. ಆನೆಕಲ್ಲು ಕದಿನಮೂಲೆ ನಿವಾಸಿ ಶೇಖ್ ಅಬ್ದುಲ್ ಖಾದರ್(50)ಮೃತಪಟ್ಟವರು. ಉಪ್ಪಳದ ರೋಸ್‍ಗಾರ್ಡ್ ಅಪಾರ್ಟ್‍ಮೆಂಟ್‍ನ ಇವರು ವಾಸಿಸುತ್ತಿದ್ದ ಕೊಠಡಿಯ ಸ್ನಾನದಗೃಹದಲ್ಲಿ ಮೃತದೇಹ ಪತ್ತೆಯಾಗಿದೆ.

              ಇವರ ಪತ್ನಿ ಪುತ್ರಿಯೊಂದಿಗೆ ತವರಿಗೆ ತೆರಳಿದ್ದ ಹಿನ್ನೆಲೆಯಲ್ಲಿ ಕಳೆದ ಮೂರು ದಿವಸಗಳಿಂದ ಕೊಠಡಿಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಶುಕ್ರವಾರ ಬೆಳಗ್ಗೆ ಕೊಠಡಿಯಿಂದ ದುರ್ವಾಸನೆ ಹೊರಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಒಳಗಿಂದ ಬಾಗಿಲು ಭದ್ರಪಡಿಸಲಾಗಿದ್ದು, ಪೊಲಿಸರು ಆಗಮಿಸಿ ಬಾಗಿಲು ಒಡೆದುನೋಡಿದಾಗ ಮೃತದೇಹ ಪತ್ತೆಯಾಗಿದೆ. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries