ಕಾಸರಗೋಡು: ಅಮೃತ ಸರೋವರ ಯೋಜನೆಯಡಿ ಬೇಕಲ ಕೋಟೆಯ ಹೊರಭಾಗದ ೩ ಹಾಗೂ ಒಳಗಿನ ೨೦ ಬಾವಿಗಳನ್ನು ಸ್ವಚ್ಛಗೊಳಿಸಲಾಗಿದ್ದು, ಕಸ ಸುರಿಯುವುದನ್ನು ತಡೆಯಲು ಕಬ್ಬಿಣದ ಗ್ರಿಲ್ ಅಳವಡಿಸುವ ಕಾಯ್ ಹಮ್ಮಿಕೊಳ್ಳಲಾಯಿತು.
ಬೇಕಲ ಕೋಟೆಯೊಳಗಿನ ಎರಡು ಬಾವಿಗಳಿಗೆ ಇಳಿದು ಸಆಗುವ ರೀತಿಯಲ್ಲಿ ಕಾಲುದಾರಿಗಳಿದ್ದು, ಈ ಬಾವಿಗಳ ಸುರಕ್ಷತೆಗಾಗಿ ಹೊಸದಾಗಿ ಸೈಡ್ ಗ್ರಿಲ್ ಅಳವಡಿಸಲಾಗುವುದು. ಯೋಜನೆ ಅಂಗವಾಗಿ ೭ ಬಾವಿಗಳ ಕೆಸರುಮಣ್ಣು ತೆರವುಗೊಳಿಸಿ, ಕುಸಿತಕ್ಕೊಳಗಾಗಿರುವ ಭಾಗವನ್ನು ಕೆಂಪುಕಲ್ಲು ಕಟ್ಟಿ ಸಂರಕ್ಷಿಸಲಾಗಿದೆ. ಬಾವಿ ಹೊರಾಂಗಣದಲ್ಲಿ ಸಂಚಾರಕ್ಕಾಗಿ ಕೆಂಪುಕಲ್ಲು ಹಾಸಿ ಕಾಲ್ನಡೆ ಹಾದಿ ನಿರ್ಮಿಸಲಾಗಿದೆ.
ಅಮೃತ್ ಸರೋವರ್ ಯೋಜನೆಯನ್ವಯ ನಡೆಸಲಾಗಿರುವ ಕಾಮಗಾರಿ ವೀಕ್ಷಣೆಗೆ ಕೇಂದ್ರ ಪ್ರಾಚ್ಯವಸ್ತು ಇಲಾಖೆ ತ್ರಿಶ್ಯೂರ್ ಸರ್ಕಲ್ ಅಧೀಕ್ಷಕ, ಪ್ರಾಚ್ಯವಸ್ತು ತಜ್ಞ ಕೆ.ರಾಮಕೃಷ್ಣ ರೆಡ್ಡಿ ಮತ್ತು ಉಪ ಅಧೀಕ್ಷಕ ಸಿ ಕುಮಾರನ್ ಅವರು ಬೇಕಲ ಕೋಟೆಗೆ ಭೇಟಿ ನೀಡಿದ್ದರು. ಬೇಕಲಕೋಟೆ ಪ್ರಭಾರ ಕನ್ಸರ್ವೇಟಿವ್ ಅಸಿಸ್ಟೆಂಟ್ ಶಾಜು ಪಿ.ವಿ, ಬೇಕಲ ಪ್ರವಾಸೋದ್ಯಮ ಫ್ರೆಟರ್ನಿಟಿ ಅಧ್ಯಕ್ಷ ಸೈಫುದ್ದೀನ್ ಕಳನಾಡ್ ಉಪಸ್ಥಿತರಿದ್ದರು.





