ಜಮ್ಶೇಡ್ಪುರ : ಜಾರ್ಖಂಡ್‌ನ ಜಮ್‌ಶೇಡ್‌ಪುರದಲ್ಲಿ 60 ವರ್ಷದ ವ್ಯಕ್ತಿಯೊಬ್ಬರ ಕುತ್ತಿಗೆಗೆ ಹೆಬ್ಬಾವು ಸುತ್ತಿಕೊಂಡು ಉಸಿರುಗಟ್ಟಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಕುತ್ತಿಗೆಗೆ ಸುತ್ತಿಕೊಂಡ ಹೆಬ್ಬಾವು: ಉಸಿರುಗಟ್ಟಿ ವ್ಯಕ್ತಿ ಸಾವು
0
ಆಗಸ್ಟ್ 30, 2024
Tags
0
samarasasudhi
ಆಗಸ್ಟ್ 30, 2024
ಜಮ್ಶೇಡ್ಪುರ : ಜಾರ್ಖಂಡ್‌ನ ಜಮ್‌ಶೇಡ್‌ಪುರದಲ್ಲಿ 60 ವರ್ಷದ ವ್ಯಕ್ತಿಯೊಬ್ಬರ ಕುತ್ತಿಗೆಗೆ ಹೆಬ್ಬಾವು ಸುತ್ತಿಕೊಂಡು ಉಸಿರುಗಟ್ಟಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಕುತ್ತಿಗೆಗೆ ಹಾವು ಸುತ್ತಿಕೊಂಡು ಹಣ ಸಂಪಾದಿಸಲು ಯತ್ನಿಸುತ್ತಿದ್ದ ವೇಳೆ ಏಕಾಏಕಿ ಹಾವು ಗಂಟಲಿಗೆ ಬಿಗಿದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲಿಸರು, ತಜ್ಞರ ಸಹಾಯದಿಂದ ಹಾವನ್ನು ಹಿಡಿದು. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಕಾಡಿಗೆ ಬಿಟ್ಟಿದ್ದಾರೆ.
ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.