ನವದೆಹಲಿ: ಹೀರೊ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಕಿರೀಟ ಧರಿಸಿ ಭಾರತ ತಂಡ ತವರಿಗೆ ಮರಳಿತು.
0
samarasasudhi
ಸೆಪ್ಟೆಂಬರ್ 20, 2024
ನವದೆಹಲಿ: ಹೀರೊ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಕಿರೀಟ ಧರಿಸಿ ಭಾರತ ತಂಡ ತವರಿಗೆ ಮರಳಿತು.
ಬುಧವಾರ ತವರಿಗೆ ಮರಳಿದ ತಂಡದ ಆಟಗಾರರನ್ನು ಹಾಕಿ ಇಂಡಿಯಾದ ಅಧಿಕಾರಿಗಳು ಹಾಗೂ ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು.
ನಂತರ ವಿಮಾನ ನಿಲ್ದಾಣದಲ್ಲಿ ಆಟಗಾರರು ಹಾಗೂ ಮ್ಯಾನೇಜಿಂಗ್ ಕಮಿಟಿಯ ಸದಸ್ಯರು ಗ್ರೂಪ್ ಫೋಟೊ ತೆಗೆಸಿಕೊಂಡರು.
ಫೈನಲ್ ಪಂದ್ಯದಲ್ಲಿ ಆತಿಥೇಯ ಚೀನಾ ವಿರುದ್ಧ ಹೋರಾಡಿ 1-0ಯಿಂದ ಭಾರತ ತಂಡ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಭಾರತ ಐದನೇ ಸಲ ಈ ಪ್ರಶಸ್ತಿ ಗೆದ್ದುಕೊಂಡಿದೆ.
ಈ ಟೂರ್ನಿಯಲ್ಲಿ ಪ್ರಾಬಲ್ಯ ಸಾಧಿಸಿ ಆಡಿದ ಎಲ್ಲಾ ಏಳೂ ಪಂದ್ಯಗಳಲ್ಲಿ ಹರ್ಮನ್‌ಪ್ರೀತ್ ಪಡೆ ಜಯಶಾಲಿಯಾಯಿತು.
ಕಳೆದ ತಿಂಗಳ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ಫೈನಲ್‌ನಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಲೀಗ್‌ನಲ್ಲಿ ಚೀನಾ ವಿರುದ್ಧ 3-0 ಗೆಲುವೂ ಸಾಧಿಸಿತ್ತು.