HEALTH TIPS

ಪೆರ್ಮುದೆಯಲ್ಲಿ ಓಣಂ ಆಚರಣೆ

         ಕುಂಬಳೆ: ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ಭಾರತೀಯ ಕೆಥೋಲಿಕ ಯುವಸಂಚಲನ ಘಟಕದ ಆಶ್ರಯದಲ್ಲಿ ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆಓಣಂ ಹಬ್ಬ ಆಚರಿಸಲಾಯಿತು. ಐಸಿವೈಎಂ ಘಟಕ  ಸದಸ್ಯರು ಹೂವಿನರಂಗೋಲಿ ಬಿಡಿಸಿ ಎಲ್ಲರನ್ನೂ ಬರಮಾಡಿಕೊಂಡರು. ಮಕ್ಕಳಿಗೆ, ಯುವಜನರಿಗೆ ಹಾಗೂ ಹಿರಿಯರಿಗೆ ವಿವಿಧ ಆಟೋಟ ಸ್ಪರ್ಧೆಗಳು, ಮನೋರಂಜನೆ ನಡೆಯಿತು. ಮಧ್ಯಾಹ್ನ ಎಲ್ಲರಿಗೂ ಓಣಂ ಸದ್ಯ ವ್ಯವಸ್ಥೆಗೊಳಿಸಲಾಯಿತು.


        ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಇಗರ್ಜಿಯ ಧರ್ಮಗುರು ವಂದನೀಯ ಫಾ. ಹೆರಾಲ್ಡ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಇಗರ್ಜಿಯ ಪಾಲನಾ ಸಮಿತಿ ಉಪಾಧ್ಯಕ್ಷೆ ಡೋರಿನ್ ಪಿರೇರಾ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಐಸಿವೈಎಂ ಪೆರ್ಮುದೆ ಘಟಕ ಅಧ್ಯಕ್ಷ ಪ್ರಶಾಂತ್ ಡಿಸೋಜ ಕಾನಡ್ಕ ಸ್ವಾಗತಿಸಿ, ಕಾರ್ಯದರ್ಶಿ ನೀಮ ಜೋಯ್ಸ್ ಕ್ರಾಸ್ತ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries