HEALTH TIPS

ಕಾಸರಗೋಡು ಜಿಲ್ಲೆಯಲ್ಲಿ ಸಂಭ್ರಮದ ಈದ್ ಮಿಲಾದುನ್ನಬಿ

            ಕಾಸರಗೋಡು : ಈದ್ ಮಿಲಾದುನ್ನಬಿ ಹಬ್ಬವನ್ನು ಜಿಲ್ಲಾದ್ಯಂತ ಭಕ್ತಿ ಸಂಭ್ರಮದಿಂದ ಸೋಮವಾರ ಆಚರಿಸಲಾಯಿತು.  ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ, ಮದ್ರಸಾ ವಿದ್ಯಾರ್ಥಿಗಳಿಗಾಗಿ ವಿಶೇಷ ಸ್ಪರ್ಧೆಗಳು, ದಫ್‍ಮುಟ್ ಒಳಗೊಂಡಂತೆ ಈದ್ ರ್ಯಾಲಿ ನಡೆಯಿತು.

             ಮಂಜೇಶ್ವರ ಉದ್ಯಾವರ ಸಾವಿರ ಜಮಾಅತ್ ಮಸೀದಿಯಲ್ಲಿ  ನಡೆದ ಸಮಾರಂಭದಲ್ಲಿ ಸಮಿತಿ ಅಧ್ಯಕ್ಷ ಸೈಫುಲ್ಲಾ ತಙಳ್ ನೇತೃತ್ವ ವಹಿಸಿದ್ದರು. ಕೋಟಪ್ಪುರ ಇಸ್ಸಾಹುಲ್ ಇಸ್ಸಹಾಣ ಸಂಘ ಹಾಗೂ ನೂರುಲ್ ಮದ್ರಸಾ ಸಂಘದ ವತಿಯಿಂದ ನಬಿದಿನ ಸಂದೇಶ ಯಾತ್ರೆ ನಡೆಯಿತು.

           ಪ್ರವಾದಿ ಮುಹಮ್ಮದ್ (ಸ) ಜನ್ಮದಿನಾಚರಣೆ ಈದ್‍ಮಿಲಾದ್ ಅಂಗವಾಗಿ ಪುತ್ತಿಗೆ ಕಟ್ಟತ್ತಡ್ಕ ಮುಹಿಮ್ಮತ್‍ನಲ್ಲಿ ಮಿಲಾದ್ ರ್ಯಾಲಿ ನಡೆಯಿತು. ಕಾಸರಗೋಡು ತಳಂಗರೆ ಮಾಲಿಕ್‍ದೀನಾರ್ ಮಸೀದಿ, ಮೆಲ್ಲಿಕುಂಜೆ ಮುಹಿಯುದ್ದೀನ್ ಜುಮಾ ಮಸೀದಿ, ತೆರುವತ್ ಜುಮಾ ಮಸೀದಿ ಸೇರಿದಂತೆ ಜಿಲ್ಲೆಯ ನಾನಾ ಕಡೆ ಈದ್ ಮಿಲಾದುನ್ನಬಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

          ಕಾಸರಗೋಡು ತಳಂಗರೆ ಮಾಲಿಕ್‍ದೀನಾರ್ ಮಸೀದಿ ವಠಾರಲ್ಲಿ ನಬಿದಿನ ರ್ಯಾಲಿ ಅಂಗವಾಗಿ ವಿದ್ಯಾರ್ಥಿಗಳಿಂದ ನಡೆದ ದಫ್‍ಮುಟ್ಟ್ ಗಮನಸೆಳೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries