ದೋಹಾ: ನಮ್ಮ ನಾಯಕ ಯಹ್ಯಾ ಸಿನ್ವರ್ ಅವರನ್ನು ಇಸ್ರೇಲ್ ಮಿಲಿಟರಿಯು ಗಾಜಾದಲ್ಲಿ ನಡೆಸಿದ ದಾಳಿಯಲ್ಲಿ ಕೊಂದು ಹಾಕಿದೆ ಎಂದು ಪ್ಯಾಲೆಸ್ಟೀನ್‌ನ ಬಂಡುಕೋರರ ಗುಂಪಾದ ಹಮಾಸ್ ಖಚಿತಪಡಿಸಿದೆ.
0
samarasasudhi
ಅಕ್ಟೋಬರ್ 19, 2024
ದೋಹಾ: ನಮ್ಮ ನಾಯಕ ಯಹ್ಯಾ ಸಿನ್ವರ್ ಅವರನ್ನು ಇಸ್ರೇಲ್ ಮಿಲಿಟರಿಯು ಗಾಜಾದಲ್ಲಿ ನಡೆಸಿದ ದಾಳಿಯಲ್ಲಿ ಕೊಂದು ಹಾಕಿದೆ ಎಂದು ಪ್ಯಾಲೆಸ್ಟೀನ್‌ನ ಬಂಡುಕೋರರ ಗುಂಪಾದ ಹಮಾಸ್ ಖಚಿತಪಡಿಸಿದೆ.
'ನಮ್ಮ ಶ್ರೇಷ್ಠ ನಾಯಕರು, ಹುತಾತ್ಮ ಸಹೋದರರಾದ ಯಹ್ಯಾ ಸಿನ್ವರ್, ಅಬು ಇಬ್ರಾಹಿಂ ನಿಧನಕ್ಕೆ ಸಂತಾಪ ಸೂಚಿಸುತ್ತೇವೆ'ಎಂದು ಕತಾರ್ ಮೂಲದ ಹಮಾಸ್ ಅಧಿಕಾರಿ ಖಲೀಲ್ ಅಲ್ ಹಯ್ಯಾ ವಿಡಿಯೊ ಸಂದೇಶದಲ್ಲಿ ಅಲ್ ಜಜೀರಾಗೆ ತಿಳಿಸಿದ್ದಾರೆ.
ಇಸ್ರೇಲ್ ಇತಿಹಾಸದಲ್ಲೇ ಅತ್ಯಂತ ಭೀಕರ ದಾಳಿ ಎನ್ನಲಾದ 2023ರ ಅಕ್ಟೋಬರ್ 7ರ ಹಮಾಸ್ ಬಂಡುಕೋರರ ದಾಳಿ ಬಳಿಕ ಸಿನ್ವರ್, ಇಸ್ರೇಲ್‌ನ ಮೋಸ್ಟ್ ವಾಂಟೆಂಡ್ ಉಗ್ರರ ಪಟ್ಟಿ ಸೇರಿದ್ದರು.
ಗಾಜಾದಲ್ಲಿ ಯುದ್ಧ ಅಂತ್ಯವಾಗುವವರೆಗೂ ಇಸ್ರೇಲ್‌ನ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಹಯ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿನ್ವರ್ ಹತ್ಯೆಯಿಂದ ಧೃತಿಗೆಡುವುದಿಲ್ಲ. ಸಂಘಟನೆ ಅವರ ತ್ಯಾಗದಿಂದ ಶಕ್ತಿ ಪಡೆಯುತ್ತದೆ. ಅವರು ನಮ್ಮ ಚಳವಳಿಯ ಸಂಕೇತವಾಗಿದ್ದರು ಎಂದೂ ಅವರು ಹೇಳಿದ್ದಾರೆ.